ಲಂಡನ್: ಜಗತ್ತಿನಾದ್ಯಂತ ವ್ಯಾಪಕ ಭೀತಿಗೆ ಕಾರಣವಾಗಿರುವ ಓಮಿಕ್ರಾನ್ ರೂಪಾಂತರದ ಅಬ್ಬರವೇ ಇನ್ನೂ ಕಡಿಮೆಯಾಗಿಲ್ಲ.. ಅದಾಗಲೇ ಅದರದೇ ಮತ್ತೊಂದು ಉಪ ತಳಿ ವೈರಸ್ ತನ್ನ ಆರ್ಭಟ ಆರಂಭಿಸಿದೆ ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.
ಕೊರೊನಾ ಓಮಿಕ್ರಾನ್‌ನ ಹೊಸ ರೂಪಾಂತರವು ಹೊರಹೊಮ್ಮಿದ್ದು, ಜೊತೆಗೆ ಹೊಸ ಹೊಸ ವೈರಸ್‌ಗಳು ಹುಟ್ಟಿಕೊಳ್ಳುತ್ತಿವೆ. ಇದೇ ವೇಳೆ ಮತ್ತೊಂದು ಹೊಸ ವೈರಸ್ ಕಾಣಿಸಿಕೊಂಡಿದೆ. ಓಮಿಕ್ರಾನ್ ವೈರಸ್ ತಳಿಯ ಉಪತಳಿಯನ್ನು ವಿಜ್ಞಾನಿಗಳು ಪತ್ತೆ ಮಾಡಿದ್ದು ಇದಕ್ಕೆ BA2 ಎಂದು ಗುರುತಿಸಿದ್ದಾರೆ.
ಮೂಲಗಳ ಪ್ರಕಾರ ಓಮಿಕ್ರಾನ್ ಮೂಲ ರೂಪಾಂತರಕ್ಕಿಂತ BA2 ರೂಪಾಂತರವು ಹೆಚ್ಚು ವ್ಯಾಪಕವಾಗಿ ಹರಡುತ್ತದೆ. ಕೆಲವು ಅನುವಂಶಿಕ ಲಕ್ಷಣಗಳಿಂದ ಈ ವೈರಸ್ ಸೋಂಕನ್ನು ಪತ್ತೆಹಚ್ಚಲು ಕಷ್ಟವಾಗುತ್ತದೆ. ಈ ಓಮಿಕ್ರಾನ್ ರೂಪಾಂತರದ BA2 ಪ್ರಕರಣಗಳು ಈಗಾಗಲೇ 54 ದೇಶಗಳಲ್ಲಿ ವರದಿಯಾಗಿದೆ ಎಂದು ತಿಳಿದು ಬಂದಿದೆ.