ಕಾಸರಗೋಡು: ಶ್ರೀ ನಾರಾಯಣ ಗುರುಕುಲಂ ಅಧ್ಯಕ್ಷ ಗುರು ಮುನಿ ನಾರಾಯಣ ಪ್ರಸಾದ ಸ್ವಾಮಿ ಅವರ ಶತಾಭಿಷೇಕ ಅಂಗವಾಗಿ ಜ್ಞಾನ ಸಂಗಮ ಕಾರ್ಯಕ್ರಮ ಕಾಞಂಗಾಡು ಮೂರನೇಮೈಲಿಗಲ್ಲು ಶ್ರೀ ಶಂಕರ ಸನಾತನ ಧಾರ್ಮಿಕ ಅಧ್ಯಯನ ಕೇಂದ್ರದಲ್ಲಿ ಜರುಗಿತು.
ಚೀಮೇನಿ ಶ್ರೀ ಅವಧೂತಾನಂದಾಶ್ರಮದ ಸಾಧು ವಿನೋದ್ ಸಮಾರಂಭ ಉದ್ಘಾಟಿಸಿದರು. ಆರೆಸ್ಸೆಸ್ ಜಿಲ್ಲಾ ಸೇವಾ ಪ್ರಮುಖ್ ಪಿ. ಬಾಬು ಧರ್ಮಪುರಿ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಶಂಕರ ಆಚಾರ್ಯನ್ ಸ್ವಾಮೀ ಭೂಮಾನಂದಪುರಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಂ. ಚಂದ್ರಶೇಖರನ್ ನೀಲೇಶ್ವರ, ಗಣೇಶ್ ಶೆಣೈ ಮಾವುಂಗಲ್, ಸುರೇಂದ್ರನ್ ತೃಪ್ಪುಣಿತ್ತುರ, ಪಿ.ಕೃಷ್ಣ ಕುಮಾರ್ ವೆಲ್ಳಿಕ್ಕೋತ್ ಉಪಸ್ಥಿತರಿದ್ದರು.