HEALTH TIPS

ತೃಣಮೂಲ ಕಾಂಗ್ರೆಸ್‌ನ ಎಲ್ಲ ಹುದ್ದೆಗಳನ್ನು ವಿಸರ್ಜಿಸಿದ ಮಮತಾ ಬ್ಯಾನರ್ಜಿ

              ಕೋಲ್ಕತ್ತ: ತೃಣಮೂಲ ಕಾಂಗ್ರೆಸ್‌ನ ಎಲ್ಲ ಹುದ್ದೆಗಳನ್ನು ಪಕ್ಷದ ವರಿಷ್ಠೆ ಮಮತಾ ಬ್ಯಾನರ್ಜಿ ವಿಸರ್ಜಿಸಿದ್ದಾರೆ.

           ಕಾಳಿಘಾಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಶನಿವಾರ ಪಕ್ಷದ ಕೆಲವು ಹಿರಿಯ ನಾಯಕರ ಜತೆ ಸಭೆ ನಡೆಸಿದ ಬಳಿಕ ಅವರು ಈ ನಿರ್ಧಾರ ಕೈಗೊಂಡಿದ್ದಾರೆ.

             ಅಲ್ಲದೆ, 20 ಸದಸ್ಯರನ್ನೊಳಗೊಂಡ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ರಚಿಸಿದ್ದಾರೆ.

ಮಮತಾ ಬ್ಯಾನರ್ಜಿ ಪಕ್ಷದ ಹೊಸ ಪದಾಧಿಕಾರಿಗಳನ್ನು ಶೀಘ್ರ ಘೋಷಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

             ಕೆಲವು ಹಿರಿಯ ನಾಯಕರ ಜತೆ ಭಿನ್ನಾಭಿಪ್ರಾಯ ಹೊಂದಿರುವ ಕಾರಣ ಅಭಿಷೇಕ್ ಬ್ಯಾನರ್ಜಿ ಅವರು ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನ ತೊರೆಯಲಿದ್ದಾರೆ ಎಂಬ ವದಂತಿಗಳ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.

            'ಇತ್ತೀಚೆಗೆ ಪಕ್ಷದ ಅಧ್ಯಕ್ಷೆಯಾಗಿ ಮರು ಆಯ್ಕೆಯಾಗಿರುವ ಮಮತಾ ಬ್ಯಾನರ್ಜಿ ಅವರು ಪಕ್ಷದ ವ್ಯವಹಾರಗಳನ್ನು ನೋಡಿಕೊಳ್ಳುವುದಕ್ಕಾಗಿ ಸಣ್ಣ ಸಮಿತಿಯೊಂದನ್ನು ರಚಿಸಿದ್ದಾರೆ. ಆ ಸಮಿತಿಯ ಸಭೆಯು ಶನಿವಾರ ನಡೆದಿದ್ದು, ಮಮತಾ ಅವರು ಪಕ್ಷದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯನ್ನು ಘೋಷಿಸಿದ್ದಾರೆ' ಎಂದು ಟಿಎಂಸಿ ನಾಯಕ ಪಾರ್ಥ ಚಟರ್ಜಿ ತಿಳಿಸಿದ್ದಾರೆ.

           ಮಮತಾ ಅವರು ಪಕ್ಷದ ಹೊಸ ಪದಾಧಿಕಾರಿಗಳ ನೇಮಕ ಮಾಡಲಿದ್ದು, ಆ ಪಟ್ಟಿಯನ್ನು ಚುನಾವಣಾ ಆಯೋಗಕ್ಕೆ ಕಳುಹಿಸಿಕೊಡಲಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

                ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಅಮಿತ್ ಮಿತ್ರ, ಪಾರ್ಥ ಚಟರ್ಜಿ, ಸುಬ್ರತಾ ಬಕ್ಷಿ, ಸುದೀಪ್ ಬಂಡೋಪಾಧ್ಯಾಯ, ಅಭಿಷೇಕ್ ಬ್ಯಾನರ್ಜಿ, ಅನುಬ್ರತಾ ಮೊಂಡಲ್, ಅರೂಪ್ ವಿಶ್ವಾಸ್, ಫಿರ್ಹಾದ್ ಹಕೀಮ್, ಯಶ್ವಂತ್ ಸಿನ್ಹಾ, ಅಸೀಮಾ ಪಾತ್ರ, ಚಂದ್ರಿಮಾ ಭಟ್ಟಾಚಾರ್ಜಿ, ಕಕೊಲಿ ಘೋಷ್ ದಸ್ತಿದಾರ್, ಶೋಭಾನ್‌ದೇವ್ ಚಟ್ಟೋಪಾಧ್ಯಾಯ, ಸುಖೇಂದು ಶೇಖರ್ ರಾಯ್, ಮೊಲೊಯ್ ಘಾಟಕ್, ಜ್ಯೋತಿಪ್ರಿಯಾ ಮಲಿಕ್, ಗೌತಮ್ ದೇವ್, ಬುಲುಚಿಕ್ ಬರೈಕ್ ಹಾಗೂ ರಾಜೇಶ್ ತ್ರಿಪಾಠಿ ಸ್ಥಾನ ಪಡೆದಿದ್ದಾರೆ.

             ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಪಡೆದವರಲ್ಲಿ ಹೆಚ್ಚಿನವರು ಮಮತಾ ಬಣದವರು ಎನ್ನಲಾಗಿದೆ.

             'ನಮ್ಮ ಅಧ್ಯಕ್ಷೆ ಹೊಸ ಪದಾಧಿಕಾರಿಗಳ ಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ. ಅದು ಪ್ರಕಟವಾಗುವ ವರೆಗೆ ಈ ಹಿಂದಿನ ಯಾವುದೇ ಹುದ್ದೆಗಳು ಅಸ್ತಿತ್ವದಲ್ಲಿ ಇರುವುದಿಲ್ಲ' ಎಂದು ಟಿಎಂಸಿಯ ಹಿರಿಯ ನಾಯಕರೊಬ್ಬರು ಹೇಳಿದ್ದಾರೆ.

            ಮಮತಾ ಬ್ಯಾನರ್ಜಿ ಹಾಗೂ ಅವರ ಸೋದರಳಿಯ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ನಡುವೆ ಭಿನ್ನಮತ ಶುರುವಾಗಿದೆ ಎಂಬ ಊಹಾಪೋಹಗಳು ಶನಿವಾರ ಕೇಳಿಬಂದಿದ್ದವು. 'ಪಕ್ಷದಲ್ಲಿ ಒಬ್ಬರಿಗೆ ಒಂದು ಹುದ್ದೆ' ಎಂಬ ವಿಚಾರವು ಬಿಕ್ಕಟ್ಟು ಸೃಷ್ಟಿಸಿದೆ. ಅಭಿಷೇಕ್ ಅವರು ಇದಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಟಿಎಂಸಿ ಪಕ್ಷದ ಅಗ್ರ ನಾಯಕರಲ್ಲಿ ಮಮತಾ ನಂತರ ಅಭಿಷೇಕ್ ಇದ್ದಾರೆ. ಪಕ್ಷದ ಹಿರಿಯರು ಹಾಗೂ ಹೊಸ ತಲೆಮಾರಿನವರ ನಡುವೆ ಅಧಿಕಾರ ಹಂಚಿಕೆ ವಿಚಾರವಾಗಿ ಬಿಕ್ಕಟ್ಟು ಇದೆ ಎಂದು ಶನಿವಾರ ವರದಿಯಾಗಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries