ನವದೆಹಲಿ: ಉತ್ತರ ಪ್ರದೇಶದ ಪಶ್ಚಿಮ ಭಾಗದ 11 ಜಿಲ್ಲೆಗಳ ಒಟ್ಟು 58 ಕ್ಷೇತ್ರಗಳಿಗೆ ಮತದಾನ ಗುರುವಾರ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ವಿಡಿಯೊ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅವರು ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.
ನವದೆಹಲಿ: ಉತ್ತರ ಪ್ರದೇಶದ ಪಶ್ಚಿಮ ಭಾಗದ 11 ಜಿಲ್ಲೆಗಳ ಒಟ್ಟು 58 ಕ್ಷೇತ್ರಗಳಿಗೆ ಮತದಾನ ಗುರುವಾರ ನಡೆಯುತ್ತಿದೆ. ಆ ಹಿನ್ನೆಲೆಯಲ್ಲಿ ವಿಡಿಯೊ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಆದಿತ್ಯನಾಥ್ ಅವರು ವಿವಾದದ ಕಿಡಿಯನ್ನು ಹೊತ್ತಿಸಿದ್ದಾರೆ.
ತಿರುವನಂತಪುರದ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಯೋಗಿ ಹೇಳಿಕೆಗೆ ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಟ್ವೀಟಿಸಿರುವ ಅವರು, 'ಬಿಜೆಪಿ ಅಧಿಕಾರಕ್ಕೆ ಬರದಿದ್ದರೆ ಉತ್ತರ ಪ್ರದೇಶವು ಕಾಶ್ಮೀರ, ಬಂಗಾಳ ಅಥವಾ ಕೇರಳವಾಗಿ ಬದಲಾಗುತ್ತದೆ ಎಂದು ಮತದಾರರಿಗೆ ಯೋಗಿ ಹೇಳಿದ್ದಾರೆ. ಒಂದು ವೇಳೆ ಇದು ಸಂಭವಿಸಿದರೆ, ಉತ್ತರ ಪ್ರದೇಶವನ್ನು ಅದೃಷ್ಟವಂತ ರಾಜ್ಯವೆಂದೇ ಕರೆಯಬಹುದು. ಕಾಶ್ಮೀರದ ಸೌಂದರ್ಯ, ಬಂಗಾಳದ ಸಂಸ್ಕೃತಿ ಮತ್ತು ಕೇರಳದ ಶಿಕ್ಷಣವು ಯುಪಿಯನ್ನು ಅದ್ಭುತ ಸ್ಥಳವನ್ನಾಗಿ ಮಾಡುತ್ತವೆ' ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಅದ್ಭುತವಾಗಿದೆ, ಆದರೆ, ಅಲ್ಲಿನ ಸರ್ಕಾರದ ಬಗ್ಗೆ ಕನಿಕರವಿದೆ ಎಂದೂ ಶಶಿ ತರೂರ್ ಟ್ವೀಟಿಸಿದ್ದಾರೆ.