ಕಾಸರಗೋಡು: ಸರ್ಕಾರಿ ನೌಕರರು ಪ್ರತಿ ಬುಧವಾರ ಕಡ್ಡಾಯವಾಗಿ ಖಾದಿ ಧರಿಸಬೇಕು ಎಂಬ ಸರ್ಕಾರದ ಆದೇಶವನ್ನು ಜಾರಿಗೊಳಿಸುವಲ್ಲಿ ಸಿವಿಲ್ ಸ್ಟೇಷನ್ ನೌಕರರು ಮಾದರಿಯಾಗಿದ್ದಾರೆ. ವಿವಿಧ ಇಲಾಖೆಗಳ ನೌಕರರು ಮೊನ್ನೆ ಬುಧವಾರ ಖಾದಿ ವಸ್ತ್ರ ಧರಿಸಿ ಕಚೇರಿಗೆ ಆಗಮಿಸಿದ್ದರು. ಮಾದರಿ ಖಾದಿ ಉಡುಗೆ ತೊಟ್ಟ ಜಿಲ್ಲಾ ನೋಂದಣಾಧಿಕಾರಿ ಕಚೇರಿ ಸಿಬ್ಬಂದಿಯನ್ನು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್ ಅಭಿನಂದಿಸಿದ್ದಾರೆ. ಜಿಲ್ಲಾ ಪರಿಶಿಷ್ಟ ಜಾತಿ ಅಭಿವೃದ್ಧಿ ಕಚೇರಿಯ ಸಂಪೂರ್ಣ ಸಿಬ್ಬಂದಿ ಖಾದಿ ಧರಿಸಿದ್ದರು.