ನವ ದೆಹಲಿ; ಉಕ್ರೇನ್‌ನಿಂದ ಹಿಂದಿರುಗುವ ವಿದ್ಯಾರ್ಥಿಗಳಿಗಾಗಿ ಕೇರಳ ಹೌಸ್ ಎರಡು ಕಾರುಗಳಲ್ಲ ಎಂಟು ಕಾರುಗಳನ್ನು ಸಿದ್ಧಪಡಿಸಿದೆ ಎಂದು ಕೇರಳ ಹೌಸ್ ನ ರೆಸಿಡೆನ್ಸ್ ಆಯುಕ್ತರು ತಿಳಿಸಿದ್ದಾರೆ. ಇತರ ರಾಜ್ಯಗಳು ತಮ್ಮ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲು ಐಷಾರಾಮಿ ವಾಹನಗಳು, ಬ್ಯಾನರ್‌ಗಳು ಮತ್ತು ಫಲಕಗಳೊಂದಿಗೆ ಗಂಟೆಗಳ ಮೊದಲೇ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಆದರೆ ಕೇರಳದ ನಿಯೋಗವು 30 ವಿದ್ಯಾರ್ಥಿಗಳಿಗೆ ಎರಡು ಕಾರುಗಳಲ್ಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿತು. ಬಳಿಕ ಇದು ವಿವಾದವಾಗಿದ್ದು, ಇದರ ಬೆನ್ನಲ್ಲೇ ರೆಸಿಡೆನ್ಸ್ ಆಯುಕ್ತರ ಹೇಳಿಕೆ ಹೊರಬಿದ್ದಿದೆ.
ಆದರೆ, ಮೊದಲ ವಿಮಾನದಲ್ಲಿ ಮಕ್ಕಳಿಗೆ ನಾಲ್ಕು ಶಿಯಾ ಕಾರುಗಳು, ಎರಡು ಎರ್ಟಿಗಾ ಕಾರುಗಳು ಮತ್ತು ಎರಡು ಇನೋವಾ ಕಾರುಗಳು ಸೇರಿದಂತೆ ಎಂಟು ಕಾರುಗಳನ್ನು ಇಲಾಖೆ ಕಾರ್ಯದರ್ಶಿಗಳಿಗೆ ನೀಡಲಾಗಿದೆ ಎಂದು ಆಯುಕ್ತರು ಹೇಳಿದ್ದರು. ಏಳು ಮಂದಿ ಪ್ರಯಾಣಿಸಬಹುದಾದ ಕಾರುಗಳಲ್ಲಿ ಐದು ಮಂದಿ ಮಾತ್ರ ಪ್ರಯಾಣಿಸಿದ್ದರು. ಇತರ ಕಾರುಗಳಲ್ಲಿ ನಾಲ್ವರು. ಕೊನೆಯ ಕಾರಿನಲ್ಲಿ ಪ್ರಯಾಣಿಸಲು ಸಹ ವಿದ್ಯಾರ್ಥಿಗಳು ಇರಲಿಲ್ಲ ಎಂದವರು ವಿವರಿಸಿದ್ದಾರೆ.
ವಿಮಾನ ನಿಲ್ದಾಣದ ಪಾಸ್ ಹೊಂದಿರುವ ಕೇರಳ ಹೌಸ್ ಕಂಟ್ರೋಲರ್ ಸೇರಿದಂತೆ ಐವರು ಅಧಿಕಾರಿಗಳು ಮಧ್ಯರಾತ್ರಿ 1.30 ರಿಂದ ವಿಮಾನ ನಿಲ್ದಾಣದಲ್ಲಿ ಕಾದು ಕುಳಿತಿದ್ದರು ಎಂದು ಆಯುಕ್ತರು ತಿಳಿಸಿದ್ದಾರೆ. ಜತೆಗೆ ಮುಖ್ಯಮಂತ್ರಿ ಸೇರಿದಂತೆ ಸಚಿವರು, ಹಿರಿಯ ಅಧಿಕಾರಿಗಳಿಗಿರುವ ವಿಐಪಿ ಪಾರ್ಕಿಂಗ್ ಪ್ರದೇಶದ ಮೂಲಕ ಕೇರಳ ವಿದ್ಯಾರ್ಥಿಗಳನ್ನು ಬರಮಾಡಿಕೊಳ್ಳಲಾಯಿತು.