HEALTH TIPS

ಕೋವಿಡ್ ಲಸಿಕೆಯಲ್ಲಿ ವಂಚನೆ ಕುರಿತ ಮಾಧ್ಯಮಗಳ ವರದಿ ಸತ್ಯಕ್ಕೆ ದೂರ, ಹಾದಿತಪ್ಪಿಸುವ ಯತ್ನ: ಕೇಂದ್ರ ಸರ್ಕಾರ

      ನವದೆಹಲಿ: ಕೋವಿಡ್ -19 ಲಸಿಕೆಯ ಎರಡು ಡೋಸ್ ಪಡೆದುಕೊಳ್ಳದ ಫಲಾನುಭವಿಗಳನ್ನು ಸಂಪೂರ್ಣ ಲಸಿಕೆ ಪಡೆದಿರುವುದಾಗಿ ನೋಂದಾಯಿಸಲಾಗುತ್ತಿದೆ ಎಂಬ ಮಾಧ್ಯಮಗಳ ವರದಿ ಸತ್ಯಕ್ಕೆ ದೂರವಾದದ್ದು, ಹಾದಿ ತಪ್ಪಿಸುವಂತಹದ್ದು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ.

    ಎರಡೂ ಡೋಸ್‌ಗಳನ್ನು ಪಡೆದಿದ್ದರೂ ಜನರಿಗೆ ಸಂಪೂರ್ಣ ಲಸಿಕೆ ಹಾಕಿರುವಂತೆ ಮೋಸದಿಂದ ನೋಂದಾಯಿಸಲಾಗುತ್ತಿದೆ ಎಂದು ಕೆಲ ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಗಳಲ್ಲಿ ಹೇಳಲಾಗಿದೆ.  ಲಸಿಕೆ ಪಡೆದಿರುವ ಜನರ ಅಂಕಿಸಂಖ್ಯೆಗಳನ್ನು ಸಹ ತಿರುಚಲಾಗಿದೆ ಎಂದು ಈ ವರದಿಗಳಲ್ಲಿ ಆರೋಪಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.    

     ಈ ರೀತಿಯ  ಮಾಧ್ಯಮಗಳ ವರದಿಗಳು ಯಾವುದೇ ಆಧಾರವಿಲ್ಲದೆ ಹಾದಿತಪ್ಪಿಸುವುದು ಮಾತ್ರವಲ್ಲದೇ, ಸಂಪೂರ್ಣವಾಗಿ ಸುಳ್ಳು ಮಾಹಿತಿವುಳ್ಳವಾಗಿವೆ. ಕೋವಿನ್ ಸಿಸ್ಟಮ್ ನಲ್ಲಿ ಆರೋಗ್ಯ ಕಾರ್ಯಕರ್ತರು ದಾಖಲಿಸಿರುವ ಮಾಹಿತಿಯ ಅರಿವು ವರದಿ ಪ್ರಕಟಿಸಿದ್ದವರಿಗೆ ಇದ್ದಂತೆ ಕಾಣುತ್ತಿಲ್ಲ. ಕೋವಿನ್ ಪೋರ್ಟಲ್ ನಲ್ಲಿ ದಾಖಲಾಗಿರುವ ಲಸಿಕಾ ಪ್ರಕ್ರಿಯೆನ್ನೂ ಕೂಡಾ ಅವರು ಅರ್ಥ ಮಾಡಿಕೊಂಡಿಲ್ಲ ಎಂದು ಸಚಿವಾಲಯ ಹೇಳಿದೆ. 

Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries