ಮಧೂರು: ಕಾಸರಗೋಡು ಸರ್ಕಾರಿ ಆಸ್ಪತ್ರೆಯಲ್ಲಿ ನಿರಂತರವಾಗಿ 12 ವರ್ಷಗಳಿಂದ ಬಿಸಿಯೂಟ, ಬಡ ರೋಗಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಆ್ಯಂಬುಲೆನ್ಸ್ ಸೇವೆ, ರಕ್ತದಾನ ಶಿಬಿರ, ವೈದ್ಯಕೀಯ ಶಿಬಿರ ಮೊದಲಾದ ಸೇವಾ ಚಟುವಟಿಕೆಗಳನ್ನು ನಡೆಸಿಕೊಂಡು ಬರುತ್ತಿರುವ ದೀನ ಬಂಧು ಚಾರಿಟೇಬಲ್ ಟ್ರಸ್ಟ್‍ನ ಸೇವಾ ಕುಟೀರದ ಯಶಸ್ಸಿಗಾಗಿ ನಡೆಸುತ್ತಿರುವ ಮನೆ ಮನೆ ಭಜನೆ ಕಾರ್ಯಕ್ರಮದಂಗವಾಗಿ ಫೆಬ್ರವರಿ 26 ಶನಿವಾರದಂದು ಸಂಜೆ 7 ರಿಂದ ಕಾಸರಗೋಡು ಟೌನ್ ಹಾಲ್ ಸಮೀಪದ ಕೆ.ಎಸ್.ರೋಡ್‍ನಲ್ಲಿರುವ ಹಿರಿಯ ಸಾರಿಗೆ ಉದ್ಯಮಿ ನಿರಂಜನ ಕೊರಕ್ಕೋಡು ಅವರ ಅನುಗ್ರಹ ನಿವಾಸದಲ್ಲಿ ಭಜನಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿಸಲಾಗಿದೆ.