ತಿರುವನಂತಪುರಂ: ಶಾಲೆಗಳು ಪುನರಾರಂಭಗೊಂಡಿರುವುದರಿಂದ ಕೈಟ್ ವಿಕ್ಟರ್ಸ್ ಮೂಲಕ 'ಫಸ್ಟ್ ಬೆಲ್ 2.0' ಡಿಜಿಟಲ್ ತರಗತಿಗಳ ವೇಳಾಪಟ್ಟಿಯನ್ನು ಪರಿಷ್ಕರಿಸಲಾಗಿದೆ. ಸೋಮವಾರದಿಂದ ಸಂಜೆ 5.30ರಿಂದ 7ರವರೆಗೆ ಎಸ್.ಎಸ್.ಎಲ್.ಸಿ. ರಿವಿಶನ್ ತರಗತಿಗಳನ್ನು ಒದಗಿಸಲಾಗುತ್ತಿದೆ, ಇದರಲ್ಲಿ ಪರೀಕ್ಷೆ ಸುಲಭಗೊಳಿಸಲು ಮೂರು ತರಗತಿಗಳಲ್ಲಿ ವಿಷಯವನ್ನು ಪ್ರಸ್ತುತಪಡಿಸಲಾಗುತ್ತದೆ.
ತರಗತಿಗಳನ್ನು ಮರುದಿನ ಬೆಳಿಗ್ಗೆ 6 ರಿಂದ 7.30 ರವರೆಗೆ ವಿಕ್ಟರ್ಸ್‌ನಲ್ಲಿ ಮತ್ತು ಬೆಳಿಗ್ಗೆ 8 , ರಾತ್ರಿ 9.30 ಕ್ಕೆ ವಿಕ್ಟರ್ಸ್ ಪ್ಲಸ್‌ನಲ್ಲಿ ಮರುಪ್ರಸಾರ ಮಾಡಲಾಗುತ್ತದೆ. ಎರಡು ವಾರಗಳಲ್ಲಿ ರಿವಿಶನ್ ಪೂರ್ಣಗೊಳ್ಳಲಿದೆ ಮತ್ತು ಮಾರ್ಚ್ ಆರಂಭದಿಂದ ಸಮಸ್ಯೆ, ಸಂಶಯಗಳ ನಿವಾರಣೆ ತರಗತಿಗಳು ನೇರ ಪ್ರಸಾರವಾಗಲಿದೆ ಎಂದು ಕೈಟ್‌ನ ಸಿಇಒ ಕೆ.ಅನ್ವರ್ ಸಾದತ್ ಮಾಹಿತಿ ನೀಡಿದರು.
ಪ್ಲಸ್ ಒನ್ ತರಗತಿಗೆ ಬೆಳಗ್ಗೆ 7.30ರಿಂದ ರಾತ್ರಿ 9ರವರೆಗೆ ಮೂರು ತರಗತಿಗಳು ನಡೆಯಲಿವೆ. ಪ್ಲಸ್ ಟು ವಿಭಾಗಕ್ಕೆ ಬೆಳಿಗ್ಗೆ 9 ರಿಂದ 11 ಮತ್ತು ಮಧ್ಯಾಹ್ನ 12.30 ರಿಂದ 1.30 ರವರೆಗೆ ಆರು ತರಗತಿಗಳಿವೆ. ರಾತ್ರಿ 8.30ರಿಂದ 11.30ರವರೆಗೆ ಮರುಪ್ರಸಾರವಾಗಲಿದೆ. ಅವರಿಗಾಗಿ ರಿವಿಶನ್ ತರಗತಿಗಳು ಮತ್ತು ಆಡಿಯೊ ಪುಸ್ತಕಗಳನ್ನು ಈ ತಿಂಗಳ 21 ರಂದು ಸಿದ್ಧಪಡಿಸಲಾಗುವುದು.