HEALTH TIPS

ಕೇರಳ ಅಮಲು ಕಪಿಮುಷ್ಠಿಯಲ್ಲಿಲ್ಲ!: ಕೆಲವರು ಸತ್ಯವನ್ನು ತಿರುಚಿ ಅಪಪ್ರಚಾರ ಮಾಡುತ್ತಿದ್ದಾರೆ: ಸಚಿವ ಎಂ.ವಿ.ಗೋವಿಂದನ್

                  ತಿರುವನಂತಪುರ: ಕೇರಳ ನಶೆಯ ಹಿಡಿತದಲ್ಲಿಲ್ಲ ಎಂದು ಸಚಿವ ಎಂ.ವಿ.ಗೋವಿಂದನ್ ಹೇಳಿದ್ದಾರೆ. ಕೇರಳವನ್ನು ನಶೆಯ ಕೇಂದ್ರ ಎಂದು ಬಿಂಬಿಸುವ ಕೆಲವರ ಪಟ್ಟಭದ್ರ ಹಿತಾಸಕ್ತಿಗಳನ್ನು ಗುರುತಿಸುವುದು ಮುಖ್ಯ ಎಂದರು.

                      ಡ್ರಗ್ಸ್ ಮಾಫಿಯಾ ವಿರುದ್ಧ ಅಬಕಾರಿ ಇಲಾಖೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು. ಯುವಜನತೆಯಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯಗಳ ಬಳಕೆ ಮತ್ತು ಸೇವನೆಗೆ ಕಡಿವಾಣ ಹಾಕಲು ಅಬಕಾರಿ ಇಲಾಖೆ ಶ್ರಮಿಸುತ್ತಿದೆ ಎಂದರು.

                 ಈ ವರ್ಷ ಜನವರಿಯಲ್ಲಿಯೇ ಅಬಕಾರಿ ಇಲಾಖೆ 1540 ಅಬಕಾರಿ ಪ್ರಕರಣಗಳಲ್ಲಿ 249 ಲೀಟರ್ ಮದ್ಯ, 4106 ಲೀಟರ್ ವಿದೇಶಿ ಮದ್ಯ, 1069 ಲೀಟರ್ ವಿದೇಶಿ ಮದ್ಯ ಮತ್ತು 22,638 ಲೀಟರ್ ವಾಶ್ ವಶಪಡಿಸಿಕೊಂಡಿದೆ. ವಿವಿಧ ಪ್ರಕರಣಗಳಲ್ಲಿ 1257 ಜನರನ್ನು ಬಂಧಿಸಲಾಗಿದೆ.

                  ಎನ್‍ಡಿಪಿಎಸ್ ಕಾಯ್ದೆಯಡಿ ಒಟ್ಟು 367 ಪ್ರಕರಣಗಳನ್ನು ದಾಖಲಿಸಲಾಗಿದೆ. 7535 ಪ್ರಕರಣಗಳಲ್ಲಿ 4554 ಕೆಜಿ ನಿಷೇಧಿತ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು 15,06,800 ರೂ. ವಶಪಡಿಸಲಾಗಿದೆ ಎಮದು ಸಚಿವರು ತಿಳಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries