HEALTH TIPS

ರಸಗೊಬ್ಬರ ದರ, ವಿತರಣೆ ಮತ್ತು ಗುಣಮಟ್ಟದ ಮೇಲೆ ನಿಯಂತ್ರಣ ಹೊಂದಲು ಹೊಸ ಕಾನೂನು ಜಾರಿಗೆ ತರಲಿರುವ ಕೇಂದ್ರ

                ನವದೆಹಲಿ :ರಸಗೊಬ್ಬರದ ಕನಿಷ್ಠ ಮಾರಾಟ ದರವನ್ನು ನಿಗದಿಪಡಿಸುವ ಹಾಗೂ ಅದರ ಗುಣಮಟ್ಟ ಮತ್ತು ವಿತರಣೆಯನ್ನು ನಿಯಂತ್ರಿಸುವ ಅಧಿಕಾರವನ್ನು ಸರಕಾರಕ್ಕೆ ನೀಡುವ ಕಾನೂನೊಂದನ್ನು ಕೇಂದ್ರ ಪ್ರಸ್ತಾಪಿಸಿದೆ.

           ಇಂಟೆಗ್ರೇಟೆಡ್ ಪ್ಲಾಂಟ್ ನ್ಯುಟ್ರಿಷನ್ ಮ್ಯಾನೇಜ್ಮೆಂಟ್ ಬಿಲ್ 2022 ಎಂಬ ಹೆಸರಿನ ಈ ಪ್ರಸ್ತಾವಿತ ಮಸೂದೆಯ ಕರಡು ಸಿದ್ಧಗೊಂಡಿದ್ದು ಅದರ ಕುರಿತಂತೆ ಎಲ್ಲಾ ಸಂಬಂಧಿತರು ತಮ್ಮ ಅಭಿಪ್ರಾಯಗಳನ್ನು ರಸಗೊಬ್ಬರ ಇಲಾಖೆಗೆ ಫೆಬ್ರವರಿ 26ರೊಳಗೆ ನೀಡಬೇಕೆಂದು ರಸಗೊಬ್ಬರ ಇಲಾಖೆ ಹೇಳಿದೆ.

             ಈ ಪ್ರಸ್ತಾವಿತ ಕಾನೂನಿನನ್ವಯ ಇಂಟೆಗ್ರೇಟೆಡ್ ಪ್ಲಾಂಟ್ ನ್ಯುಟ್ರಿಷನ್ ಮ್ಯಾನೇಜ್ಮೆಂಟ್ ಅಥಾರಿಟಿ ಆಫ್ ಇಂಡಿಯಾ ಸ್ಥಾಪಿಸುವ ಉದ್ದೇಶವನ್ನೂ ಹೊಂದಲಾಗಿದೆ.

ಸಾವಯವ ರಸಗೊಬ್ಬರ, ನ್ಯಾನೋ ರಸಗೊಬ್ಬರ ಸೇರಿದಂತೆ ಸಮತೋಲಿತ ರಸಗೊಬ್ಬರಗಳ ಸುಸ್ಥಿರ ಬಳಕೆ ಮತ್ತು ಅಭಿವೃದ್ಧಿಯ ಉದ್ದೇಶವನ್ನು ಈ ಪ್ರಸ್ತಾವಿತ ಕಾನೂನು ಹೊಂದಿದೆ. ರಸಗೊಬ್ಬರ ಉತ್ಪಾದನೆ, ವಿತರಣೆ, ದರ ನಿರ್ವಹಣೆಯ ಪ್ರಕ್ರಿಯೆಯನ್ನು ಸರಳಗೊಳಿಸಲು ಹಾಗೂ ಉದ್ಯಮ ನಡೆಸುವುದನ್ನು ಸುಲಭಗೊಳಿಸುವ ಉದ್ದೇಶವನ್ನೂ ಈ ಪ್ರಸ್ತಾವಿತ ಕಾನೂನು ಹೊಂದಿದೆ.

             ವಿಭಿನ್ನ ಸಂಗ್ರಹಣಾ ಅವಧಿ ಹೊಂದಿರುವ ಹಾಗೂ ವಿವಿಧ ಪ್ರದೇಶಗಳಿಗೆ ಅಥವಾ ವಿಭಿನ್ನ ವರ್ಗಗಳ ಗ್ರಾಹಕರಿಗೆ ತಕ್ಕಂತೆ ರಸಗೊಬ್ಬರಗಳಿಗೆ ವಿಭಿನ್ನ ದರಗಳನ್ನು ನಿಗದಿಪಡಿಸುವ ಅಧಿಕಾರವನ್ನೂ ಈ ಕಾನೂನು ಕೇಂದ್ರ ಸರಕಾರಕ್ಕೆ ನೀಡಲಿದೆ.

         ಸೂಕ್ತ ನೋಂದಣಿಯಿಲ್ಲದೆ ಯಾವುದೇ ವ್ಯಕ್ತಿ ರಸಗೊಬ್ಬರ ತಯಾರಿ, ಮಾರಾಟ ಅಥವಾ ಆಮದು ಮಾಡುವ ಹಾಗಿಲ್ಲ, ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆರಸಗೊಬ್ಬರವನ್ನು ಹೇಗೆ ಸಾಗಾಟ ಮಾಡಬೇಕೆಂಬ ಕುರಿತು ನಿರ್ದೇಶನ ನೀಡುವ ಅಧಿಕಾರವನ್ನೂ ಈ ಪ್ರಸ್ತಾವಿತ ಕಾನೂನು ಸರಕಾರಕ್ಕೆ ನೀಡಲಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries