ಮಾಸ್ಕೋ: ಉಕ್ರೇನ್-ರಷ್ಯಾಸಂಘರ್ಷ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ದೇಶದ ಎಲ್ಲ ನಿವಾಸಿಗಳ ವಿದೇಶಿ ಹಣ ವರ್ಗಾವಣೆಯನ್ನು ನಿಷೇಧಿಸಿದ್ದಾರೆ.
ಮಾಸ್ಕೋ: ಉಕ್ರೇನ್-ರಷ್ಯಾಸಂಘರ್ಷ ಮುಂದುವರೆದಿರುವಂತೆಯೇ ಇತ್ತ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ತಮ್ಮ ದೇಶದ ಎಲ್ಲ ನಿವಾಸಿಗಳ ವಿದೇಶಿ ಹಣ ವರ್ಗಾವಣೆಯನ್ನು ನಿಷೇಧಿಸಿದ್ದಾರೆ.
ಉಕ್ರೇನ್ ಮೇಲಿನ ದಾಳಿ ಹಿನ್ನಲೆಯಲ್ಲಿ ಜಗತ್ತಿನ ಬಹುತೇಕ ರಾಷ್ಟ್ರಗಳು ರಷ್ಯಾ ಮೇಲೆ ಆರ್ಥಿಕ ದಿಗ್ಭಂಧನ ಹೇರುತ್ತಿದ್ದು, ಇದಕ್ಕೆ ಪ್ರತಿಯಾಗಿ ರಷ್ಯಾ ಕೂಡ ತನ್ನ ವಿರೋಧಿ ರಾಷ್ಟ್ರಗಳ ಮೇಲೆ ಆರ್ಥಿಕ ದಿಗ್ಭಂಧನ ಹೇರುತ್ತಿದೆ.
ಈ ಬಗ್ಗೆ ಮಾಹಿತಿ ನೀಡಿರುವ ರಷ್ಯಾ ಸರ್ಕಾರ, ಮಾಸ್ಕೋ ಮೇಲೆ ಪಶ್ಚಿಮದಿಂದ ವಿಧಿಸಲಾದ ಆರ್ಥಿಕ ನಿರ್ಬಂಧಗಳಿಗೆ ಪ್ರತೀಕಾರವಾಗಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಮಾರ್ಚ್ 1 ರಿಂದ ರಷ್ಯಾದ ನಿವಾಸಿಗಳಿಂದ ವಿದೇಶಿ ವಿನಿಮಯ ಸಾಲ ಮತ್ತು ವರ್ಗಾವಣೆಯನ್ನು ರಷ್ಯಾದ ಹೊರಗೆ ನಿಷೇಧಿಸಲು ಆದೇಶಿಸಿದ್ದಾರೆ ಎಂದು ತಿಳಿಸಿದೆ.