ಆಲಪ್ಪುಳ: ವಿಶ್ವಶಾಂತಿಗಾಗಿ ಮಾಜಿ ಸೈನಿಕರೊಬ್ಬರು ಆಲಪ್ಪುಳದಲ್ಲಿ ಮಿನಿ ತಾಜ್ ಮಹಲ್ ನಿರ್ಮಿಸಿದ್ದಾರೆ. ಈ ಶಾಂತಿ ಸ್ಮಾರಕವು ರಾಷ್ಟ್ರೀಯ ಹೆದ್ದಾರಿ 66, ಅಲಪ್ಪುಳ ತುಂಪೆÇೀಲಿ ಜಂಕ್ಷನ್‍ನಲ್ಲಿದೆ. ಗ್ಲೋಬಲ್ ಪೀಸ್ ಪ್ಯಾಲೇಸ್ ನ್ನು ಮಾಜಿ ನೌಕಾ ಅಧಿಕಾರಿ ಎಕೆಬಿ ಕುಮಾರ್ ನಿರ್ಮಿಸಿದ್ದಾರೆ.
ಶಾಂತಿ ಅರಮನೆಯು 7,000 ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ ಮತ್ತು 47 ಅಡಿ ಎತ್ತರವಿದೆ. ವಿಶ್ವಶಾಂತಿಯ ಹೆಸರಲ್ಲಿ ಇಂಥದ್ದೊಂದು ಕಲ್ಪನೆ ಮೂಡಿತು ಎನ್ನುತ್ತಾರೆ ಎಕೆಬಿ ಕುಮಾರ್. ಗ್ಲೋಬಲ್ ಪೀಸ್ ಪ್ಯಾಲೇಸ್ ನ್ನು ತಾಜ್ ಮಹಲ್‍ನ ಅದೇ ಮಾದರಿಯಲ್ಲಿ ನಿರ್ಮಿಸಲಾಗಿದೆ, ಚಕ್ರವರ್ತಿ ಷಹಜಹಾನ್ ತನ್ನ ಪ್ರೀತಿಪಾತ್ರರಿಗಾಗಿ ನರ್ಮಿಸಿದ್ದರೆ, ಕುಮಾರ್ ಅವರು ಯುದ್ಧ ವೀರರು ಮತ್ತು ವೀರ ಹುತಾತ್ಮರಿಗಾಗಿ ನಿರ್ಮಿಸಿರುವರು.
ಇದನ್ನು ಸಂಪೂರ್ಣವಾಗಿ ಮಾರ್ಬಲ್ ಮತ್ತು ಟೈಲ್ಸ್‍ಗಳಿಂದ ಮಾಡಲಾಗಿದೆ. ಎರಡು ಅಂತಸ್ತಿನ ಕಟ್ಟಡದ ನೆಲ ಮಹಡಿಯಲ್ಲಿ ಎಕೆಜಿ ಕುಮಾರ್ ಅವರ ಮನೆಯಿದೆ. ಮೇಲಿನ ಮಹಡಿಯಲ್ಲಿ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಸೇನೆ, ನೌಕಾಪಡೆ, ವಾಯುಪಡೆ ಮತ್ತು ಇತರ ಅರೆಸೇನಾ ಮತ್ತು ಪೋಲೀಸ್ ಪಡೆಗಳನ್ನು ಪ್ರತಿನಿಧಿಸುವ ನಾಲ್ಕು ಮಿನಾರ್‍ಗಳನ್ನು ಹೊಂದಿದೆ. ಇವುಗಳಲ್ಲಿ ಕಾರ್ಗಿಲ್ ಸೇರಿದಂತೆ ವಿವಿಧ ಯುದ್ಧಗಳಲ್ಲಿ ಪ್ರಾಣ ಕಳೆದುಕೊಂಡ ಹುತಾತ್ಮರು ಮತ್ತು ಸೇವೆಯಲ್ಲಿ ಪ್ರಾಣ ಕಳೆದುಕೊಂಡವರ ಭಾವಚಿತ್ರಗಳು ಮತ್ತು ಹೆಸರುಗಳು ಸೇರಿವೆ.
ಇದಲ್ಲದೆ, ಯುದ್ಧ ಸ್ಮಾರಕಗಳು, ಯುದ್ಧನೌಕೆಗಳು ಮತ್ತು ಶಸ್ತ್ರಾಸ್ತ್ರಗಳ ಸಂಕ್ಷಿಪ್ತ ವಿವರಣೆಯನ್ನು ಸಹ ಇಲ್ಲಿ ಕೆತ್ತಲಾಗಿದೆ. ನಾಲ್ಕು ವರ್ಷಗಳಲ್ಲಿ ಪೂರ್ಣಗೊಂಡ ಸ್ಮಾರಕಕ್ಕೆ ಸುಮಾರು 1.5 ಕೋಟಿ ರೂ.ವೆಚ್ಚ ತಗಲಿದೆ. ಗ್ಲೋಬಲ್ ಪೀಸ್ ಪ್ಯಾಲೇಸ್ ನ್ನು ಯಾರಿಂದಲೂ ಒಂದು ರೂಪಾಯಿ ತೆಗೆದುಕೊಳ್ಳದೆ ನಿವೃತ್ತಿ ವೇತನ ಮತ್ತು ಪಿಂಚಣಿ ಸಂಗ್ರಹ ಬಳಸಿ ನಿರ್ಮಿಸಲಾಗಿದೆ ಎಂದು ಕುಮಾರ್ ತಿಳಿಸಿದ್ದಾರೆ.