ನವದೆಹಲಿ: ಬಿಟ್ ಕಾಯಿನ್ ಸೇರಿದಂತೆ ಎಲ್ಲ ರೀತಿಯ ಕ್ರಿಪ್ಟೋ ಕರೆನ್ಸಿಗಳ ಚಾಲನೆಯ ಮೇಲೆ ಇದುವರೆಗೂ ದೇಶದಲ್ಲಿ ನಿಯಂತ್ರಣ ಅಥವಾ ನಿಷೇಧ ಇಲ್ಲದ್ದರಿಂದ ಈ ಕುರಿತ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಕ್ರಿಪ್ಟೋ ಕರೆನ್ಸಿ ತ್ವರಿತ ಕುರಿತು ಕೇಂದ್ರದ ಸ್ಪಷ್ಟನೆಗೆ ನಿರ್ದೇಶನ ಕೋರಿ ಅಜಯ್ ಭಾರದ್ವಾಜ್ ಎಂಬುವವರು ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್ ಹಾಗೂ ಸೂರ್ಯಕಾಂತ್ ಅವರಿದ್ದ ಪೀಠವು, ಕೂಡಲೇ ಕೇಂದ್ರದ ನಿಲುವನ್ನು ಸ್ಪಷ್ಟಪಡಿಸುವಂತೆ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯ ಭಾಟಿ ಅವರಿಗೆ ಸೂಚಿಸಿತು.
'ಬಿಟ್ ಕಾಯಿನ್ ಹೊಂದುವುದು ಅಕ್ರಮವೇ ಎಂಬುದನ್ನು ಸ್ಪಷ್ಟಪಡಿಸಿ' ಎಂಬ ಪೀಠದ ಸೂಚನೆಗೆ ಪ್ರತಿಕ್ರಿಯಿಸಿದ ಭಾಟಿ, ಒಟ್ಟು 87,000 ಬಿಟ್ ಕಾಯಿನ್‌ಗಳನ್ನು ವಶಪಡಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಧದಲ್ಲಿ ವಿಚಾರಣೆ ನಡೆಸಿದರೂ, ಆರೋಪಿಯು ತನಿಖೆಗೆ ಸಹಕರಿಸುತ್ತಿಲ್ಲ. ಈ ಕುರಿತು ಸ್ಪಷ್ಟಪಡಿಸಲು ಸಮಯಾವಕಾಶ ಬೇಕು ಎಂದು ಕೋರಿದರು.
ಜಾರಿ ನಿರ್ದೇಶನಾಲಯವು ಕಳೆದ ವರ್ಷದ ಜುಲೈನಲ್ಲಿ ಕೇಂದ್ರಕ್ಕೆ ಕ್ರಿಪ್ಟೋ ಕರೆನ್ಸಿ ಸ್ಥಿತಿಗತಿಯ ವರದಿಯನ್ನು ಸಲ್ಲಿಸಿದೆ ಎಂದು ಅವರು ಪೀಠಕ್ಕೆ ವಿವರಿಸಿದರು.
ತನಿಖಾಧಿಕಾರಿಗೆ ಸಹಕಾರ ನೀಡುವಂತೆ ಆರೋಪಿಗಳಿಗೆ ನಿರ್ದೇಶಕ ನೀಡಬೇಕು. ವಿಚಾರಣಾ ವರದಿಯನ್ನು 4 ವಾರಗಳೊಳಗೆ ಸಂಗ್ರಹಿಸಿ ಸಲ್ಲಿಸಲು ಹೇಳಿತಲ್ಲದೆ, ನಂತರವಷ್ಟೇ ಮುಂದಿನ ವಿಚಾರಣೆ ನಿಗದಿಪಡಿಸುವುದಾಗಿ ತಿಳಿಸಿತು.