HEALTH TIPS

ಇತಿಹಾಸ ಅಧ್ಯಯನ ಸಮಾಜ ವಿಕಾಸದ ದಾರಿ ದೀಪ : ಯೋಗೀಶ್ ಮಲ್ಲಿಗೆಮಾಡು

             ಕಾಸರಗೋಡು: ಒಂದು ಸಮಾಜ ಅಭಿವೃದ್ಧಿಯತ್ತ ಸಾಗಬೇಕಾದರೆ ಆ ಸಮಾಜದ ಇತಿಹಾಸ, ಪರಂಪರೆ, ಸಂಸ್ಕøತಿಯ ಅಧ್ಯಯನ ಅಗತ್ಯ. ಜತೆಗೆ ಸಮಾಜದ ಬಗೆಗಿನ ಅಭಿಮಾನವಿರಬೇಕು. ವಸ್ತುನಿಷ್ಠವಾಗಿ ಇತಿಹಾಸವನ್ನು ಹೆಚ್ಚಿನ ಮಟ್ಟದಲ್ಲಿ ಅಧ್ಯಯನ ಮಾಡುತ್ತಾ ಹೋದಂತೆ ಪರಂಪರೆಯ ಅರಿವು ಮೂಡುತ್ತದೆ ಎಂದು ಮಂಗಳೂರಿನ ತರಬೇತುದಾರ ಮತ್ತು ಆಪ್ತ ಸಮಾಲೋಚಕ ಯೋಗೀಶ್ ಮಲ್ಲಿಗೆಮಾಡು ಅವರು ಹೇಳಿದರು. 

                 ಅವರು ಬೀರಂತಬೈಲಿನ ಶ್ರೀ ಭಿಕ್ಷು ಲಕ್ಷ್ಮಣಾನಂದ ಸ್ವಾಮೀಜಿ ಸಭಾ ಭÀವನದಲ್ಲಿ ನಡೆದ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಕಾಸರಗೋಡು ಉಪಸಂಘದ ಮಹಾಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.   

                 ನಮ್ಮನ್ನು ನಾವು ಯಾರೆಂದು ಅರಿಯಬೇಕಾದರೆ ಪರಂಪರೆಯ ಅರಿವು ಪಡೆಯಬೇಕು. ಹಿರಿಯರು ಹಾಕಿಕೊಟ್ಟ ಆಚಾರ, ವಿಚಾರ, ಕಟ್ಟುಕಟ್ಟಳೆಗಳಲ್ಲಿ ವೈಜ್ಞಾನಿಕ ಸತ್ಯಾಂಶಗಳಿವೆ. ಅದನ್ನು ನಾವು ಇಂದು ಅತ್ಯಗತ್ಯವಾಗಿ ತಿಳಿದುಕೊಳ್ಳಬೇಕು. ಪರಂಪರೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಹಾಸುಹೊಕ್ಕಾಗಿದೆ. ಅದು ಮಾನವನ ವಿಕಾಸವನ್ನು ಮುನ್ನಡೆಸುವ ದಾರಿದೀಪವಾಗಿದೆ ಎಂದರು. 

                ಮುಖ್ಯ ಅತಿಥಿ ನಿವೃತ್ತ ಅಧ್ಯಾಪಕಿ ಯಮುನ ಟೀಚರ್ ನಾಗರಕಟ್ಟೆ ಅವರು ಹಿತನುಡಿಗಳನ್ನಾಡಿ ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಕಾಸರಗೋಡು ಉಪಸಂಘದ ಅಧ್ಯಕ್ಷ ವಿದ್ಯಾನಂದ ಹೂಡೆ ಅಧ್ಯಕ್ಷತೆ ವಹಿಸಿದರು. ಸೇವಾ ಸಂಘದ ಕೋಶಾಧಿಕಾರಿ ನಾಗೇಶ್ ನಾಗರಕಟ್ಟೆ ಅವರು ವರದಿ ಹಾಗು ಲೆಕ್ಕಪತ್ರ ಮಂಡಿಸಿದರು. ಕಾಸರಗೋಡು ಜಿಲ್ಲಾ ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘದ ಕಾರ್ಯದರ್ಶಿ ಸತೀಶ್ ದೋಣಿಬಾಗಿಲು, ಗೌರವಾಧ್ಯಕ್ಷ ನಿರಂಜನ ಕೊರಕ್ಕೋಡು, ಗೌರವ ಕಾರ್ಯದರ್ಶಿ ಬಿ.ಪಿ.ವೆಂಕಟ್ರಮಣ ಬೀರಂತಬೈಲು, ಉದ್ಯಮಿ ಲಕ್ಷ್ಮಣ ಬೀರಂತಬೈಲು ಉಪಸ್ಥಿತರಿದ್ದು ಶುಭ ಹಾರೈಸಿದರು.  

                  ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ, ಪಿಯುಸಿ ಮತ್ತು ಪದವಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ಉಪಸಂಘದ ವ್ಯಾಪ್ತಿಯಲ್ಲಿರುವ ಸ್ವಜಾತಿ ಬಾಂಧವರ ವಿದ್ಯಾರ್ಥಿಗಳಾದ ಸುಜನ್‍ದೀಪ್ ಕೋಟೆಕಣಿ, ಶರಣ್ಯ ವಿ.ಕೆ.ಕೋಟೆಕಣಿ, ಶಿವಾನಿ ಬಿ.ಬೀರಂತಬೈಲು ಅವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಕೊರೊನಾ ಯೋಧರಾದ ಮೋಹನ್ ರಾವ್ ಕೆ.ಎಸ್. ಅಶೋಕನಗರ, ಕೆ.ರಾಜೇಶ್ವರಿ ಬೆಂಗಳೂರು, ದಿವ್ಯಾ ನಾಗರಕಟ್ಟೆ, ಶೋಭಾ ಕೋಟೆಕಣಿ, ಪೂರ್ಣಿಮಾ ಕೆ.ಬಟ್ಟಂಬಾರೆ, ನಿಶಾ ಅನಿಲ್ ನಾಗರಕಟ್ಟೆ, ಗೀತಾ ಕೊರಕೋಡು ಅವರನ್ನು ಸಮ್ಮಾನಿಸಿ ಗೌರವಿಸವಾಯಿತು. 

               ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಸ್ತಂಗತರಾದ ಮರಕಡದ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಶ್ರೀಗಳು ಹಾಗು ಕಳೆದ ಒಂದು ವರ್ಷದಲ್ಲಿ ನಿಧನ ಹೊಂದಿದ ಸಮಾಜದ ಬಂಧುಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು. ಕಾಸರಗೋಡು ಉಪಸಂಘದ ಜೊತೆ ಕಾರ್ಯದರ್ಶಿ ರಾಮ್ ಮೋಹನ್ ನಾಗರಕಟ್ಟೆ ಸ್ವಾಗತಿಸಿದರು. ಜಿಲ್ಲಾ ಸಂಘದ ಸದಸ್ಯರಾದ ಚಂಚಲಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಪ್ರದೀಪ್ ಬೇಕಲ್ ವಂದಿಸಿದರು. ಕಾರ್ಯಕ್ರಮದ ಬಳಿಕ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರಗಿತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries