ಮಲಪ್ಪುರಂ: ಹಿತ್ತಲಲ್ಲಿ ಚಿನ್ನದ ನಿಧಿ ಪತ್ತೆಯಾಗಿದೆ. ಉದ್ಯೋಗ ಖಾತ್ರಿ ಯೋಜನೆಯ ಕಾರ್ಮಿಕರು ತೆಂಗಿನ ಸಸಿಯ ಗುಂಡಿ ಅಗೆಯುತ್ತಿದ್ದಾಗ ನಿಧಿ ಪತ್ತೆಯಾಗಿದೆ. ಕೊಟ್ಟಾಯಂನ ಪೆÇನ್ಮಲ ತೆಕ್ಕೆಮುರಿಯಲ್ಲಿರುವ ಪುಷ್ಪರಾಜ್ ಅವರ ಮನೆಯ ಅಂಗಳದಿಂದ ನಿಧಿ ಪತ್ತೆಹಚ್ಚಲಾಗಿದೆ.
ಕಾರ್ಮಿಕರು ಗುಂಡಿ ಅಗೆಯುತ್ತಿದ್ದಾಗ ಮೊದಲು ಮಡಿಕೆಗಳು ಕಾಣಿಸಿಕೊಂಡವು. ನಂತರ ಎಲ್ಲರೂ ಮಡಕೆಯನ್ನು ತೆರೆದಾಗ ಅದರೊಳಗೆ ಚಿನ್ನದ ನಾಣ್ಯಗಳು ಮತ್ತು ಉಂಗುರಗಳು ಕಂಡುಬಂದವು. ನಿಧಿಯನ್ನು ಕಾರ್ಮಿಕರು ಮಾಲೀಕರಿಗೆ ಒಪ್ಪಿಸಿದ್ದಾರೆ.
ಕುಟುಂಬದವರು ಪಂಚಾಯಿತಿ ಅಧಿಕಾರಿಗಳಿಗೆ ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಬಳಿಕ ಸರ್ಕಾರ ಖಜಾನೆ ಇಲಾಖೆಗೆ ಮಾಹಿತಿ ನೀಡಿ ಜಿಲ್ಲಾ ಖಜಾನೆಗೆ ವರ್ಗಾಯಿಸಿತು. ನಿಧಿಯ ಬಗ್ಗೆ ಮಾಹಿತಿ ಬಂದ ನಂತರ ಅನೇಕರು ವೀಕ್ಷಿಸಲು ಆಗಮಿಸಿದರು.
ಮಳೆ ನೀರು ಕೊಯ್ಲಿಗೆ ಅನುಕೂಲವಾಗಲೆಂದು ಈ ಹಿಂದೆ ತೆಂಗಿನ ತೋಟಗಳಿದ್ದ ಜಾಗದಲ್ಲಿ ಅಗೆಯಲಾಗಿತ್ತು. ಇದೀಗ ತೆಂಗಿನ ಸಸಿಗಳನ್ನು ನಾಟಿ ಮಾಡುವಾಗ ಮಡಿಕೆ ಪತ್ತೆಯಾಗಿದೆ. ಚಿನ್ನದ ಆಭರಣಗಳು ಲೋಹದ ಪೆಟ್ಟಿಗೆಯಲ್ಲಿ ಕಂಡುಬಂದಿದೆ.