ಕಾಸರಗೋಡು: ಕೇಂದ್ರ ಸರ್ಕಾರದ ಫುಡ್ ಸೇಫ್ಟಿ ಆ್ಯಂಡ್ ಸ್ಟಾಂಡಾರ್ಡ್ ಅಥಾರಿಟಿ ಆಫ್ ಇಂಡಿಯ(ಎಫ್‍ಎಸ್‍ಎಸ್‍ಎಐ)ದ ಈಟ್ ರೈಟ್ ಕ್ಯಾಂಪಸ್ನಲ್ಲಿ ಕೇರಳ ಕೇಂದ್ರೀಯ ವಿಶ್ವ ವಿದ್ಯಾಲಯಕ್ಕೆ ಪಂಚತಾರಾ ರೇಟಿಂಗ್ ಲಭ್ಯವಾಗಿದೆ.
ನೂರರಲ್ಲಿ 98 ಅಂಕಗಳೊಂದಿಗೆ ವಿಶ್ವ ವಿದ್ಯಾಲಯ ಅತಿ ಹೆಚ್ಚು ರೇಟಿಂಗ್ ಖಚಿತಪಡಿಸಿ ಪಂಚತಾರಾ ರೇಟಿಂಗ್ ಗಳಿಸಿ ದಏಶದ ಮೊದಲ ಸಹಕಾರಿ ವಿಶ್ವ ವಿದ್ಯಾಲಯ ಎಂಬ ಸಾಧನೆಗೂ ಪಾತ್ರವಾಗಿದೆ.ಸುರಕ್ಷಿತ ಹಾಗೂ ಆರೋಗ್ಯಯುತ ಆಹಾರ ರೀತಿಯಲ್ಲಿ ಪ್ರೋತ್ಸಾಹಿಸಲು ಕಾಲೇಜು, ಸರ್ಕಾರಿ ವಇಶ್ವ ವಇದ್ಯಾಲಯ, ಆಸ್ಪತ್ರೆ ಮುಂತಾದೆಡೆ ಈಟ್ ರೈಟ್ ಇಂಡಿಯಾ ಯೋಜನೆ ಜಾರಿಗೊಳಿಸಲಾಗಿದೆ. ಶುಚಿತ್ವದಿಂದ ಕೂಡಿದ, ಸುರಕ್ಷಿತ, ಆರೋಗ್ಯಕರ ಆಹಾರ ಕ್ರಮಗಳಿಗೆ ಸಂಬಂಧಿಸಿದ ತಿಳಿವಳಿಕೆ ಮೊದಲಾದ ಮಾಣದಂಡಗಳ ಆಧಾರದಲ್ಲಿ ರೇಟಿಂಗ್ ನೀಡಲಾಗುತ್ತಿದೆ.