HEALTH TIPS

ಚುನಾವಣೆ ಸಮಯದಲ್ಲೇ ಪಂಜಾಬ್ ಸಿಎಂಗೆ ಇಡಿ ಬಿಗ್ ಶಾಕ್: ತಡರಾತ್ರಿ ಛನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಅರೆಸ್ಟ್

      ಪಂಜಾಬ್: ಪಂಜಾಬ್ ಮುಖ್ಯಮಂತ್ರಿ ಚರಂಜಿತ್ ಛನ್ನಿ ಸೋದರಳಿಯ ಭೂಪಿಂದರ್ ಸಿಂಗ್ ಹನಿಯನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಡರಾತ್ರಿ ಬಂಧಿಸಿದ್ದಾರೆ.

      ಅಕ್ರಮ ಮರಳು ಗಣಿಗಾರಿಕೆ ಸಂಬಂಧಿತ ಕೇಸ್​​ನಲ್ಲಿ ಭೂಪೇಂದ್ರ ಸಿಂಗ್​ ಮನೆ, ವಿವಿಧ ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ನಿನ್ನೆ ಸಂಜೆ ಅವರನ್ನು ಬಂಧಿಸಿದ್ದು, ಇಂದು ಸಿಬಿಐ ಕೋರ್ಟ್​ಗೆ ಹಾಜರುಪಡಿಸಲಿದೆ.

     ಪಂಜಾಬ್ ವಿಧಾನಸಭೆ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ಇಂಥದ್ದೊಂದು ಬೆಳವಣಿಗೆ ತುಂಬ ಮಹತ್ವದ್ದೆನಿಸಿದೆ. ಅಕ್ರಮ ಮರಳು ಗಣಿಗಾರಿಕೆ ಪ್ರಕರಣದಡಿ ಇ.ಡಿ. ಕಳೆದ ತಿಂಗಳು ಪಂಜಾಬ್​ನ ವಿವಿಧೆಡೆ ರೇಡ್​ ಮಾಡಿ, ಸುಮಾರು 10 ಕೋಟಿ ರೂಪಾಯಿಗಳನ್ನು ಜಪ್ತಿ ಮಾಡಿದ್ದು, ಅದರಲ್ಲಿ 8 ಕೋಟಿ ರೂಪಾಯಿ ಚರಣಜಿತ್​ ಸಿಂಗ್​ ಛನ್ನಿಯವರಿಗೆ ಸೇರಿದ್ದಾಗಿದೆ.

       ಫೆಬ್ರವರಿ 20 ರಂದು ಪಂಜಾಬ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರಕ್ಕೆ ದೊಡ್ಡ ಹಿನ್ನಡೆಯಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries