ಪಾಲಕ್ಕಾಡ್: ಪಾಲಕ್ಕಾಡ್‍ನ ಮಲಂಪುಳದ ಕೊರಕಲುಗಳಲ್ಲಿ ಸಿಲುಕಿದ್ದ ಬಾಬು ವಿಶ್ವನಾಥನ್ ಈಗ ಸ್ಟಾರ್ ಆಗಿದ್ದಾರೆ. ಆಸ್ಪತ್ರೆಯಿಂದ ಹೊರಬಂದ ಬಳಿಕ ಬಾಬು ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ತರಬೇತಿ ಪಡೆದರೆ ಎವರೆಸ್ಟ್ ಏರಲು ತನ್ನಿಂದ ಸಾಧ್ಯ ಎನ್ನುತ್ತಾರೆ ಬಾಬು. ಪ್ರಸ್ತುತ ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲ. ಇನ್ನೂ ಪ್ರವಾಸಗಳು ಮುಂದುವರಿಯಲಿದೆ. ಆದರೆ ಯಾರೂ ಅನುಮತಿ ಇಲ್ಲದೆ ತನ್ನ ಸಾಹಸವನ್ನು ಅನುಕರಿಸಬೇಡಿ ಎಂದು ಬಾಬು ಹೇಳಿದರು.
ಬಾಬು ಅವರ ಎವರೆಸ್ಟ್ ಆರೋಹಣದ ಆಸಕ್ತಿಯ ಹೇಳಿಕೆಯ ಬಳಿಕ ನೇಪಾಳದಿಂದ ಬಾಬುವನ್ನು ಕೋರಿ ಕರೆ ಬಂದಿದೆ. ಸಾಹಸ ಹುಡುಕುವವರ ಕನಸಾಗಿರುವ ಮೌಂಟ್ ಎವರೆಸ್ಟ್ ನ್ನು ಏರಲು ಬಾಬು ಅವರನ್ನು ಸ್ವಾಗತಿಸಲಾಗಿದೆ. ಕಳೆದ 13 ವರ್ಷಗಳಿಂದ ನೇಪಾಳದಲ್ಲಿ ನೆಲೆಸಿರುವ ಬಾಬಿ ಆಂಟೋನಿ ಅವರು ಬಾಬು ಅವರನ್ನು ನೇಪಾಳಕ್ಕೆ ಆಹ್ವಾನಿಸಿದ್ದಾರೆ. ಕಷ್ಟದ ಪರಿಸ್ಥಿತಿಯಲ್ಲಿ ಬಾಬು ಬದುಕುಳಿದ ಸುದ್ದಿ ನೋಡಿದಾಗ ನನ್ನ ಮನಸ್ಸಿಗೆ ಬಂದ ವಿಚಾರವಿದು ಎಂದಿರುವರು.
ಬಾಬು ಅವರಿಗೆ ಆಸಕ್ತಿ ಇದ್ದರೆ ನೇಪಾಳಕ್ಕೆ ಸ್ವಾಗತಿಸುವುದಾಗಿ ಬಾಬಿ ಆಂಟೋನಿ ಹೇಳಿದ್ದಾರೆ. ಬಾಬು ಅವರು ನೇಪಾಳಕ್ಕೆ ಬರಲು ಅಗತ್ಯವಿರುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಬಾಬಿ ಹೇಳಿದ್ದಾರೆ. ಬಾಬಿ ಅವರ ಪೋನ್ ನಂಬರ್ ಕೂಡ ಕೊಟ್ಟಿದ್ದಾರೆ. ಇಂದು ಬೆಳಗ್ಗೆ 11 ಗಂಟೆಗೆ ಪಾಲಕ್ಕಾಡ್ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಾಬು ಮನೆಗೆ ಮರಳಿದ್ದಾರೆ. ಜಿಲ್ಲಾಧಿಕಾರಿ ಮೃಣ್ಮಯಿ ಮತ್ತಿತರರು ಆಸ್ಪತ್ರೆಗೆ ತೆರಳಿದ್ದರು. ಕಾಲು ಜಾರಿ ಕೊರಕಲು ಬಿದ್ದಿದ್ದು, ಭಯವೆನಿಸಲಿಲ್ಲ ಎಂದು ಬಾಬು ಮಾಧ್ಯಮದವರ ಬಳಿ ಹೇಳಿಕೊಂಡಿದ್ದರು.