HEALTH TIPS

ರಾಜ್ಯದಲ್ಲಿ ಪರೀಕ್ಷಾ ದಿನಾಂಕಗಳಲ್ಲಿ ಯಾವುದೇ ಬದಲಾವಣೆ ಇಲ್ಲ; ಸೋಮವಾರದಿಂದ ಅಂಗನವಾಡಿಗಳ ಸಹಿತ ಎಲ್ಲಾ ತರಗತಿಗಳ ಆರಂಭ

              ತಿರುವನಂತಪುರ: ಕೋವಿಡ್  ಮೂರನೇ ಅಲೆಯ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಚ್ಚಲಾಗಿದ್ದ ಶಾಲೆಗಳು ಸೋಮವಾರದಿಂದ ಸಂಪೂರ್ಣವಾಗಿ ತೆರೆಯಲಿವೆ. ಅಂಗನವಾಡಿಗಳು ಸೇರಿದಂತೆ 1 ರಿಂದ 9 ನೇ ತರಗತಿಗಳು ಸೋಮವಾರದಿಂದ ತೆರೆದುಕೊಳ್ಲಲಿದೆ. ಶಾಲೆಗಳು ತೆರೆಯಲಿರುವುದರಿಂದ ಅಂಗನವಾಡಿಗಳನ್ನೂ ಪುನರಾರಂಭಿಸಲು ಮಕ್ಕಳ ಕಲ್ಯಾಣ ಇಲಾಖೆ ನಿರ್ಧರಿಸಿದೆ.

                    ಅಂಗನವಾಡಿಗಳನ್ನು ನಿರಂತರವಾಗಿ ಮುಚ್ಚುವುದರಿಂದ ಮಕ್ಕಳ ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಧಕ್ಕೆಯಾಗಲಿದೆ ಎಂಬ ಅಧ್ಯಯನ ಆಧರಿಸಿ ಫೆ.14ರಿಂದ ಅಂಗನವಾಡಿಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಅಂಗನವಾಡಿಗಳ ಪುನರಾರಂಭವು ಮಕ್ಕಳಿಗೆ ಸಾಕಷ್ಟು ಪೌಷ್ಟಿಕಾಂಶವನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಸರ್ಕಾರ ಭಾವಿಸುತ್ತದೆ. ಇದೇ ವೇಳೆ, ಮಕ್ಕಳು ವ್ಯವಹರಿಸುವ ಸಿಬ್ಬಂದಿ ಮತ್ತು ಪೋಷಕರಿಗೆ ಕೋವಿಡ್ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಚಿವರು ಸೂಚಿಸಿದ್ದಾರೆ.

                ಶಾಲೆ ಆರಂಭಕ್ಕೂ ಮುನ್ನ ಸಾರ್ವಜನಿಕ ಶಿಕ್ಷಣ ಸಚಿವ ವಿ.ಶಿವಂಕುಟ್ಟಿ ಅವರ ಅಧ್ಯಕ್ಷತೆಯಲ್ಲಿ ನಿನ್ನೆ ಉನ್ನತ ಮಟ್ಟದ ಸಭೆ ಕರೆಯಲಾಗಿತ್ತು. ಆನ್‍ಲೈನ್ ಸಭೆಯಲ್ಲಿ ಡಿಡಿ, ಆರ್‍ಡಿಡಿ, ಎಡಿ ಮತ್ತು ಡಿಇಒ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಆನ್‍ಲೈನ್ ಸಭೆಯಲ್ಲಿ ಶಾಲೆ ಆರಂಭಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲಾಯಿತು.

                     ಹೆಚ್ಚಿನ ತರಗತಿಗಳು ಆಫ್‍ಲೈನ್‍ನಲ್ಲಿ ನಡೆಯಲಿರುವುದರಿಂದ ಶಾಲೆಗಳನ್ನು ಸ್ವಚ್ಛಗೊಳಿಸಲು ನಿರ್ಧರಿಸಲಾಗಿದೆ. ಈ ಹಿಂದೆ ಹಿರಿಯ ತರಗತಿಗಳನ್ನು ತೆರೆದಾಗ ಅನುಸರಿಸಲಾದ ಅದೇ ಮಾರ್ಗಸೂಚಿಗಳನ್ನು ಅನುಸರಿಸಿ ಶಾಲೆಗಳನ್ನು ಮತ್ತೆ ತೆರೆಯಲಾಗುತ್ತದೆ. ಮಕ್ಕಳು ಮತ್ತು ಶಿಕ್ಷಕರು ಶಾಲೆಗಳಲ್ಲಿ ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.

                   ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಾಲೆಗಳಲ್ಲಿ ಪಾಠ ಬೋಧನೆಯಲ್ಲಿ ಆಗಿರುವ ಪ್ರಗತಿಯ ಮೌಲ್ಯಮಾಪನವನ್ನೂ ಮಾಡಲಾಯಿತು. 10ನೇ ತರಗತಿ ವಿದ್ಯಾರ್ಥಿಗಳಿಗೆ ಶೇ.90ರಷ್ಟು ಹಾಗೂ ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ಶೇ.75ರಷ್ಟು ಪಾಠ ಮುಗಿಸಲಾಗಿದೆ ಎಂದು ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ನಿಗದಿತ ಅವಧಿಯೊಳಗೆ ಪಾಠ ಪೂರ್ಣಗೊಳಿಸದ ಶಾಲೆಗಳು ಹೆಚ್ಚುವರಿ ತರಗತಿಗಳನ್ನು ನೀಡಿ ಕೂಡಲೇ ಪಾಠ ಪೂರ್ಣಗೊಳಿಸಿ ಕೊರತೆ ತುಂಬಲು ಕ್ರಮಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ. ಗುಡ್ಡಗಾಡು ಮತ್ತು ಹಿಂದುಳಿದ ಪ್ರದೇಶಗಳಲ್ಲಿ ಸೇವೆಗೆ ಬಿಆರ್‍ಸಿ ಸಂಪನ್ಮೂಲ ಶಿಕ್ಷಕರು ಮತ್ತು ಎಸ್‍ಎಸ್‍ಕೆ ಡಯಟ್ ಶಿಕ್ಷಕರನ್ನು ನಿಯೋಜಿಸಲು ನಿರ್ಧರಿಸಲಾಗಿದೆ.

                    ಕೋವಿಡ್ ಕಾರಣದಿಂದಾಗಿ ಕಲಿಕೆಗೆ ಅಡ್ಡಿ ಉಂಟಾದರೆ ದಿನಂಪ್ರತಿ ಹಂಗಾಮಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಶಿಕ್ಷಕರಿಗೆ ನಿರ್ದೇಶನ ನೀಡಿದೆ. ಎಲ್ಲಾ ಶಾಲೆಗಳು ಜಿಲ್ಲಾವಾರು ಕಲಿಕಾ ಪ್ರಗತಿ ವರದಿಯನ್ನು ಸಾರ್ವಜನಿಕ ಶಿಕ್ಷಣ ನಿರ್ದೇಶಕರಿಗೆ ಸಲ್ಲಿಸಬೇಕು. ಅವರು ಆಫ್‍ಲೈನ್ ತರಗತಿಗಳನ್ನು ಪ್ರಾರಂಭಿಸಿದರೂ ಆನ್‍ಲೈನ್ ತರಗತಿಗಳನ್ನು ಮುಂದುವರಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ.

                       ಏತನ್ಮಧ್ಯೆ, ನಿಗದಿತ ಮಾದರಿ ಪರೀಕ್ಷೆಗಳು ಮಾರ್ಚ್ 16 ರಂದು ಪ್ರಾರಂಭವಾಗುತ್ತವೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries