ನವದೆಹಲಿ: ಸಶಸ್ತ್ರ ಪಡೆಗಳಲ್ಲಿನ 'ಒಂದು ಶ್ರೇಣಿ, ಒಂದು ಪಿಂಚಣಿ' (ಒಆರ್‌ಒಪಿ) ನೀತಿ ಕುರಿತು ಕೇಂದ್ರ ಸರ್ಕಾರವನ್ನು ಬುಧವಾರ ಪ್ರಶ್ನಿಸಿರುವ ಸುಪ್ರೀಂಕೋರ್ಟ್, ವಾಸ್ತವವಾಗಿ ನೀಡಿದ್ದಕ್ಕಿಂತ ಹೆಚ್ಚಿನದ್ದನ್ನು ಕೊಟ್ಟಿರುವುದಾಗಿ ಹೇಳುತ್ತಿರುವುದು ಅತಿಶಯೋಕ್ತಿ ಎಂದು ಹೇಳಿದೆ.

ನ್ಯಾಯಾಲಯ ಇದೇ ವೇಳೆ ಕೇಂದ್ರದ 'ಮಾರ್ಪಡಿಸಿದ ಅಶ್ಯೂರ್ಡ್ ಕೆರಿಯರ್ ಪ್ರೋಗ್ರೆಷನ್' (ಎಂಎಸಿಪಿ) ಯೋಜನೆಯನ್ನೂ ಪ್ರಶ್ನಿಸಿದೆ.
'ಕೇಂದ್ರ ಸರ್ಕಾರವು ಒಆರ್‌ಒಪಿ ನೀತಿಯನ್ನು ಹೇಗೆ ಜಾರಿಗೊಳಿಸಿದೆ ಮತ್ತು ಸೈನಿಕರಿಗೆ ಯಾವ ಪ್ರಯೋಜನಗಳನ್ನು ವಿಸ್ತರಿಸಿದೆ' ಎಂದು ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್, ಸೂರ್ಯಕಾಂತ್, ವಿಕ್ರಮ್‌ನಾಥ್ ಅವರನ್ನೊಳಗೊಂಡ ಪೀಠ ಕೇಳಿದೆ.
ಕೇಂದ್ರದ ಪರವಾಗಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಹಾಜರಾದರು.