ಮುಳ್ಳೇರಿಯ: ಊರ ಜನತೆಯ ಹೋರಾಟದ ಫಲವಾಗಿ ಬೋವಿಕ್ಕಾನ ಎಂಟನೇ ಮೈಲಿಗಲ್ಲು-ಮಲ್ಲ ದೇವಸ್ಥಾನ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದರೂ, ನಿಧಾನಗಿತಿಯಿಂದ ಕೆಲಸಕಾರ್ಯ ನಡೆಯುತ್ತಿರುವ ಬಗ್ಗೆ ಮತ್ತೆ ಜನತೆ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ಪಂಚಾಯಿತಿಯ ಯೋಜನೆಯಲ್ಲಿ ಅಳವಡಿಸಿ ಸುಮಾರು 2ಕೋಟಿ ರೂ. ವೆಚ್ಚದಲ್ಲಿ ಒಂದುವರೆ ಕಿ.ಮೀ ರಸ್ತೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ತಿಂಗಳ ಹಿಂದೆ ಕಾಮಗಾರಿ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಈ ಹಾದಿಯಾಗಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಸ್ಥಳೀಯರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ರಸ್ತೆ ಕಾಮಗಾರಿ ಹಿನ್ನೆಲೆಯಲ್ಲಿ ಬೋವಿಕ್ಕಾನದ ಜನತೆ ಅಮ್ಮಂಗೋಡು ಭಜನಾ ಮಂದಿರ ಮೂಲಕ ಅಥವಾ ಪೊವ್ವಲ್‍ನಿಂದ ಪಾರಪಳ್ಳಿ ಹಾದಿಯಾಗಿ ಮಲ್ಲ ತೆರಳುತ್ತಿದ್ದಾರೆ.ಈ ಎರಡೂ ರಸ್ತೆಗಳ ಕಿರಿದಾಗಿದ್ದು, ಟ್ರಾಫಿಕ್ ಜಾಮ್‍ಗೆ ಕಾರಣವಾಗುತ್ತಿದೆ. ಮಾರ್ಚ್ ತಿಂಗಳಲ್ಲಿಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ವಾರ್ಷಿಕ ಉತ್ಸವ, ಪೈಕ ಮಣವಾಟಿ ಮಖಾಂನಲ್ಲಿ ಉರುಸ್ ನಡೆಯಲಿರುವ ಹಿನ್ನೆಲೆಯಲ್ಲಿ ಮಲ್ಲ ರಸ್ತೆಯ ಅಭಿವೃದ್ಧಿ ಕಾರ್ಯ ತ್ವರಿತಗೊಳಿಸುವಂತೆ ಈ ಪ್ರದೇಶದ ಜನರು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿರುವ ಬಗ್ಗೆ ಮುಸ್ಲಿಂಲೀಗ್ ಮಲ್ಲ ವಾರ್ಡು ಸಮಿತಿ ತನ್ನ ಅಸಮಧಾನ ವ್ಯಕ್ತಪಡಿಸಿದ್ದು, ಈ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮನವಿಸಲ್ಲಿಸಲು ತೀರ್ಮಾನಿಸಿದೆ.