ತಿರುವನಂತಪುರ: ಸಿಪಿಎಂನ ನೂತನ ಕೇಂದ್ರ ಕಚೇರಿಗೆ ಸಿದ್ಧತೆ ನಡೆದಿದೆ. ಆರು ಅಂತಸ್ತಿನ ನೂತನ ಕಟ್ಟಡಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಶಂಕುಸ್ಥಾಪನೆ ನೆರವೇರಿಸಿದರು. ತಿರುವನಂತಪುರದ ಎಕೆಜಿ ಸೆಂಟರ್ ಬಳಿ ಪಕ್ಷ ಖರೀದಿಸಿದ 31.95 ಸೆಂಟ್ಸ್ ಜಾಗದಲ್ಲಿ ನೂತನ ಕಟ್ಟಡ ನಿರ್ಮಾಣವಾಗಲಿದೆ.
ಈಗಿರುವ ಎಕೆಜಿ ಕಲಿಕೆ ಮತ್ತು ಸಂಶೋಧನಾ ಕೇಂದ್ರದ ವಿಸ್ತರಣೆಯ ಭಾಗವಾಗಿ ಹೊಸ ಕೇಂದ್ರ ಕಚೇರಿ ಕಟ್ಟಡವನ್ನು ನಿರ್ಮಿಸಲು ಪಕ್ಷವು ನಿರ್ಧರಿಸಿದೆ ಎಂದು ತಿಳಿದುಬಂದಿದೆ.
ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಮಾತನಾಡಿ, ರಾಜ್ಯ ಸಮಿತಿಯ ಕೆಲಸವನ್ನು ಹೆಚ್ಚು ಪರಿಣಾಮಕಾರಿಯಾಗಿ ಮಾಡಲು ಹೊಸ ಕಚೇರಿ ನಿರ್ಮಾಣವಾಗಲಿದೆÉ.
ಸರ್ಕಾರದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಸಲಹೆ ನೀಡುವಷ್ಟು ಪಕ್ಷದ ವ್ಯವಸ್ಥೆ ಸದೃಢವಾಗಿರಬೇಕು ಎಂದು ಮುಖ್ಯಮಂತ್ರಿ ಸೂಚಿಸಿದರು.