HEALTH TIPS

ಬ್ರಿಟನ್​ನಲ್ಲಿ ಕಳವಳ ಸೃಷ್ಟಿಸಿದ ಡೆಲ್ಟಾಕ್ರಾನ್ ರೂಪಾಂತರಿ

              ಲಂಡನ್: ಕರೊನಾ ವೈರಸ್​ನ ಡೆಲ್ಟಾ ಮತ್ತು ಒಮಿಕ್ರಾನ್ ರೂಪಾಂತರಿಗಳ ಸಮ್ಮಿಶ್ರ ಲಕ್ಷಣಗಳನ್ನು ಹೊಂದಿರುವ ಡೆಲ್ಟಾಕ್ರಾನ್ ಪ್ರಭೇದದ ಪ್ರಕರಣಗಳು ಬ್ರಿಟನ್​ನಲ್ಲಿ ಪತ್ತೆಯಾಗಿದ್ದು ಕಳವಳಕ್ಕೆ ಕಾರಣವಾಗಿದೆ. ಒಬ್ಬ ರೋಗಿಯಲ್ಲಿ ಏಕ ಕಾಲದಲ್ಲಿ ಡೆಲ್ಟಾ ಮತ್ತು ಒಮಿಕ್ರಾನ್ ತಳಿ ಇರುವುದನ್ನು ವೈದ್ಯರು ಪತ್ತೆ ಹಚ್ಚಿದ್ದಾರೆ.

           ಸೈಪ್ರಸ್​ನ ಸಂಶೋಧಕರು ಮೊದಲ ಬಾರಿಗೆ ಡೆಲ್ಟಾಕ್ರಾನ್ ತಳಿಯನ್ನು ಕಂಡು ಹಿಡಿದಿದ್ದರು. ಆದರೆ ಅದೊಂದು 'ಲ್ಯಾಬ್ ಪ್ರಮಾದ' ಎಂದು ತಜ್ಞರು ಹೇಳಿ ಅದರ ಸಾಧ್ಯತೆಯನ್ನು ತಳ್ಳಿ ಹಾಕಿದ್ದರು. ಕರೊನಾ ಪರೀಕ್ಷೆಗಾಗಿ ಸಂಗ್ರಹಿಸಿದ ಸ್ಯಾಂಪಲ್​ಗಳಲ್ಲಿ ಡೆಲ್ಟಾಕ್ರಾನ್ ಇರುವುದು ಪತ್ತೆಯಾಗಿದೆ ಎಂದು ಬ್ರಿಟನ್​ನ ಆರೋಗ್ಯ ಭದ್ರತಾ ಸಂಸ್ಥೆ (ಯುಕೆಎಚ್​ಎಸ್​ಎ) ತಿಳಿಸಿದೆ. ಅದರ ಮೇಲೆ ನಿಗಾ ಇರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

             ಆದರೆ, ಡೆಲ್ಟಾಕ್ರಾನ್ ಎಷ್ಟರ ಮಟ್ಟಿಗೆ ಸೋಂಕುಕಾರಕ ಅಥವಾ ಅದರ ಲಕ್ಷಣದ ತೀವ್ರತೆ ಹೇಗಿರುತ್ತದೆ ಎನ್ನುವುದನ್ನು ಸಂಸ್ಥೆ ಹೇಳಿಲ್ಲ. ಇದು ಬ್ರಿಟನ್​ನಲ್ಲೇ ಹುಟ್ಟಿದ್ದೇ ಅಥವಾ ಬೇರೆ ಯಾವುದಾದರೂ ದೇಶದಿಂದ ಆಮದಾಗಿದ್ದೇ ಎನ್ನುವುದು ಕೂಡ ಇನ್ನೂ ಸ್ಪಷ್ಟವಾಗಿಲ್ಲ. ಈ ಪ್ರಭೇದವು ಕರೊನಾ ಲಸಿಕೆಯ ಮೇಲೆ ಯಾವ ರೀತಿಯ ಪರಿಣಾಮ ಬೀರಬಹುದು ಎನ್ನುವುದು ಕೂಡ ಖಚಿತವಾಗಿಲ್ಲ.

             ಕೋವಿಡ್​ನಿಂದ ಮಾನಸಿಕ ಅಸ್ವಸ್ಥತೆ ಹೆಚ್ಚಳ?: ಆತಂಕ, ಖಿನ್ನತೆ, ಮಾದಕದ್ರವ್ಯ ಬಳಕೆ, ನಿದ್ರಾ ಸಮಸ್ಯೆ ಸಹಿತ ಹಲವು ಮಾನಸಿಕ ಅಸ್ವಸ್ಥತೆ ಹೆಚ್ಚಾಗಲು ಕೋವಿಡ್ ವ್ಯಾಧಿ ಕಾರಣವಾಗಬಹುದು ಎಂದು ಅಮೆರಿಕದ ಅಧ್ಯಯನವೊಂದು ಅಭಿಪ್ರಾಯ ಪಟ್ಟಿದೆ. ಕರೊನಾ ಸೋಂಕಿತರಲ್ಲಿ ಮಾನಸಿಕ ಸ್ವಾಸ್ಥ್ಯದ ಮೇಲೆ ನಿಗಾ ಇರಿಸುವುದಕ್ಕೆ ಆದ್ಯತೆ ನೀಡುವುದು ಅಗತ್ಯ ಎಂದು ಬಿಎಂಜೆ ಪತ್ರಿಕೆಯಲ್ಲಿ ಬುಧವಾರ ಪ್ರಕಟವಾದ ಅಧ್ಯಯನ ವರದಿ ಹೇಳಿದೆ. ವಾಷಿಂಗ್ಟನ್ ಯುನಿವರ್ಸಿಟಿಯ ಝಿಯಾದ್ ಅಲ್-ಅಲೈ ಅಧ್ಯಯನ ವರದಿಯನ್ನು ಸಿದ್ಧಪಡಿಸಿದ್ದಾರೆ.

1.2 ಕೋಟಿ ಮೊಲ್ನುಪಿರಾವಿರ್ ಮಾತ್ರೆ ಖರೀದಿ: ಕರೊನಾ ಚಿಕಿತ್ಸೆಗೆ ಬಳಸಲಾಗುವ 'ವಿವಾದಾತ್ಮಕ' ಮೊಲ್ನುಪಿರಾವಿರ್ ಮಾತ್ರೆ ಮಾರುಕಟ್ಟೆಗೆ ಬಂದ ಮೊದಲ ತಿಂಗಳಲ್ಲೇ ಭಾರತೀಯರು ಸುಮಾರು 50 ಕೋಟಿ ರೂಪಾಯಿ ಮೌಲ್ಯದ 1.2 ಕೋಟಿ ಮಾತ್ರೆಗಳನ್ನು ಖರೀದಿಸಿದ್ದರು. ಆರೋಗ್ಯ ಸಂಶೋಧನಾ ಸಂಸ್ಥೆ ಐಕ್ಯೂವಿಐಎ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ದೃಢಪಟ್ಟಿದೆ. ನುಂಗುವ ಕೋವಿಡ್-ತಡೆ ಮಾತ್ರೆ ಮೊಲ್ನುಪಿರಾವಿರ್ ಬಳಕೆಗೆ ಭಾರತೀಯ ಔಷಧಗಳ ಮಹಾ ನಿಯಂತ್ರಕರು (ಡಿಸಿಜಿಐ) 2021 ಡಿಸೆಂಬರ್​ನ ಕೊನೆ ವಾರ ಅನುಮೋದನೆ ನೀಡಿದ್ದರು.

               ಪ್ರಕರಣ ಕೊಂಚ ಏರಿಕೆ: ಭಾರತದಲ್ಲಿ ಕರೊನಾದ ಹೊಸ ಪ್ರಕರಣಗಳ ಸಂಖ್ಯೆ ಬುಧವಾರಕ್ಕೆ ಹೋಲಿಸಿದರೆ ಗುರುವಾರ ತುಸು ಏರಿಕೆ ಕಂಡಿದೆ. ಗುರುವಾರ 30,757 ಕೇಸ್​ಗಳು ದೃಢಪಟ್ಟಿವೆ. ಬುಧವಾರ 30,615 ಪ್ರಕರಣಗಳು ವರದಿಯಾಗಿದ್ದವು. ದೇಶದಲ್ಲಿ ಸೋಂಕಿತರ ಒಟ್ಟು ಸಂಖ್ಯೆ 4,27,54,315ಕ್ಕೆ ಏರಿದೆ. 541 ರೋಗಿಗಳು ಮೃತಪಟ್ಟು ಸಾವಿನ ಸಂಖ್ಯೆ 5,10,413ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

           ಸಾವಿನ ಲೆಕ್ಕಾಚಾರದಲ್ಲಿ ತಪ್ಪಾಗಿಲ್ಲ: ದೇಶದಲ್ಲಿ ಕರೊನಾದಿಂದ ಮೃತಪಟ್ಟವರ ಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ ಎಂಬ ವರದಿಗಳನ್ನು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ತಳ್ಳಿ ಹಾಕಿದೆ. ಭಾರತದ ಕರೊನಾ ಸಾವಿನ ಸಂಖ್ಯೆ ಅಧಿಕೃತವಾಗಿ ಪ್ರಕಟಿಸಿದ್ದಕ್ಕಿಂತ ಜಾಸ್ತಿಯಿದೆ ಎಂದು ಅಧ್ಯಯನ ವರದಿಯೊಂದನ್ನು ಉಲ್ಲೇಖಿಸಿ ಮಾಧ್ಯಮಗಳು ಪ್ರಕಟಿಸಿರುವುದು 'ಸುಳ್ಳು ಹಾಗೂ ಸಂಪೂರ್ಣ ಅಸಮರ್ಪಕ' ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ. ಸಾವಿನ ಸಂಖ್ಯೆ ವರದಿ ಮಾಡುವ ಉತ್ತಮ ವ್ಯವಸ್ಥೆ ಭಾರತದಲ್ಲಿದೆ ಎಂದಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries