ನವದೆಹಲಿ: ಮನೆ ಮನೆಗೆ ಕೋರಿಯರ್, ಪಾರ್ಸೆಲ್ ತಂದುಕೊಡುವ ಸಂಸ್ಥೆಗಳು ಬೇಕಾದಷ್ಟಿವೆ. ಆದರೆ ಅವುಗಳಿಗಿಂತಲೂ ಸುಲಭ ಹಾಗೂ ಅತ್ಯಂತ ಕಡಿಮೆ ದರದ ಸೇವೆ ಎಂದರೆ ರೈಲು. ಇಲ್ಲಿಯವರೆಗೆ ರೈಲ್ವೆಯಲ್ಲಿ ಕಳುಹಿಸಲಾಗುತ್ತಿದ್ದ ಪಾರ್ಸೆಲ್‌ಗಳನ್ನು ರೈಲು ನಿಲ್ದಾಣಕ್ಕೆ ಹೋಗಿ ಪಡೆದುಕೊಂಡು ಬರಬೇಕಿತ್ತು.
ನವದೆಹಲಿ: ಮನೆ ಮನೆಗೆ ಕೋರಿಯರ್, ಪಾರ್ಸೆಲ್ ತಂದುಕೊಡುವ ಸಂಸ್ಥೆಗಳು ಬೇಕಾದಷ್ಟಿವೆ. ಆದರೆ ಅವುಗಳಿಗಿಂತಲೂ ಸುಲಭ ಹಾಗೂ ಅತ್ಯಂತ ಕಡಿಮೆ ದರದ ಸೇವೆ ಎಂದರೆ ರೈಲು. ಇಲ್ಲಿಯವರೆಗೆ ರೈಲ್ವೆಯಲ್ಲಿ ಕಳುಹಿಸಲಾಗುತ್ತಿದ್ದ ಪಾರ್ಸೆಲ್‌ಗಳನ್ನು ರೈಲು ನಿಲ್ದಾಣಕ್ಕೆ ಹೋಗಿ ಪಡೆದುಕೊಂಡು ಬರಬೇಕಿತ್ತು.
ಇಡೀ ವಿಶ್ವದಲ್ಲಿಯೇ ಭಾರತೀಯ ರೈಲ್ವೆ ವಿವಿಧ ವಿಷಯಗಳಲ್ಲಿ ಮೇಲ್ದರ್ಜೆಗೆ ಏರುತ್ತಿರುವ ಈ ಹೊತ್ತಿನಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಪಾರ್ಸೆಲ್‌ಗಳನ್ನು ಮನೆ ಬಾಗಿಲಿಗೆ ತರುವ ಯೋಜನೆ ಆರಂಭಿಸಿದೆ. ಈ ಯೋಜನೆಗೆ ಬೇಕಾದ ಎಲ್ಲಾ ಸಿದ್ಧತೆಗಳು ಭರದಿಂದ ಸಾಗಿದ್ದು, ಶೀಘ್ರವೇ ಇದು ಜನ ಸಾಮಾನ್ಯರಿಗೆ ಲಭ್ಯವಾಗಲಿದೆ.
ಲಾಜಿಸ್ಟಿಕ್ಸ್ ವ್ಯವಹಾರದಲ್ಲಿ ತನ್ನ ಹಿಡಿತವನ್ನು ಹೆಚ್ಚಿಸಲು ನಿರ್ಧರಿಸಿರುವ ರೈಲ್ವೆ ಇಲಾಖೆ ಇಂಥದ್ದೊಂದು ಯೋಜನೆಗೆ ಮುಂದಾಗಿದೆ. ದೇಶದ ಯಾವುದೇ ಮೂಲೆಯಿಂದ ಚಿಕ್ಕಪುಟ್ಟ ವಸ್ತುಗಳಿಂದ ಹಿಡಿದು ಬೃಹದಾಕಾರದ ವಸ್ತುಗಳನ್ನು ಇನ್ಮುಂದೆ ಪಾರ್ಸೆಲ್ ಕಳುಹಿಸಿದರೆ ಅದು ಯಾರಿಗೆ ತಲುಪಬೇಕೋ ಅವರ ಮನೆಯ ಬಾಗಿಲಿಗೇ ಮುಟ್ಟಲಿದೆ.
ಈಗ ಇ-ಕಾಮರ್ಸ್ ಮತ್ತು ಕೊರಿಯರ್ ಕಂಪನಿಯಂತೆ, ರೈಲ್ವೆ ಪಾರ್ಸೆಲ್ ನೀಡಲಿದೆ. ಇದಕ್ಕಾಗಿ ಮೊಬೈಲ್‌ನಲ್ಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿಕೊಳ್ಳುವ ಅಗತ್ಯವಿದ್ದು, ಅದರ ಕುರಿತು ಸಂಪೂರ್ಣ ವಿವರವನ್ನು ರೈಲ್ವೆ ಇಲಾಖೆ ಶೀಘ್ರದಲ್ಲಿ ನೀಡಲಿದೆ. ಬೇರೆಲ್ಲಾ ಕೋರಿಯರ್ ಸರ್ವೀಸ್‌ಗಳಂತೆ ಈ ಅಪ್ಲಿಕೇಶನ್ ಸಹಾಯದಿಂದ ವಸ್ತುಗಳನ್ನು ಟ್ರ್ಯಾಕ್ ಮಾಡಲು ಸಾಧ್ಯವಾಗುತ್ತದೆ.
ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಈ ಯೋಜನೆ ಆರಂಭವಾದರೆ, ಕೋಲ್ಕತಾದಿಂದ ನಿಮ್ಮ ನೆಚ್ಚಿನ ಸಿಹಿತಿಂಡಿಗಳ ಬಾಕ್ಸ್ ಅನ್ನು, ವಾರಾಣಸಿಯಿಂದ ಸೀರೆಯನ್ನು ಅಥವಾ ಬಿಹಾರದಿಂದ ಮೂಟೆ ಅಕ್ಕಿಯನ್ನು ಕೂಡ ಸುಲಭವಾಗಿ ಮನೆಯ ಬಾಗಿಲಿಗೆ ಪಡೆಯಬಹುದು. ಸಾಂಪ್ರದಾಯಿಕವಲ್ಲದ ಸರಕು ಸಾಗಣೆಯನ್ನು ಸಾಗಿಸುವ ಪ್ರಯತ್ನದಲ್ಲಿ, ರೈಲ್ವೆಯು ಮನೆ-ಮನೆಗೆ ವಿತರಣಾ ಸೇವೆಯ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸುತ್ತಿದೆ. ಈ ಮೂಲಕ ದೂರದ ಊರುಗಳಿಂದ ನಮಗೆ ಬೇಕಾಸ ವಸ್ತುಗಳನ್ನು ರೈಲು ಸೇವೆ ಮೂಲಕವೂ ಸುಲಭವಾಗಿ ಪಡೆಯಬಹುದು ಎಂದು ಇಲಾಖೆ ಹೇಳಿದೆ.