ನವದೆಹಲಿ: ಉಕ್ರೇನ್ ನಲ್ಲಿನ ಪರಿಸ್ಥಿತಿ ಮೌಲ್ಯಮಾಪನದ ಬಗ್ಗೆ ಯೂರೋಪಿಯನ್ ಒಕ್ಕೂಟ ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಒಂದು ವೇಳೆ ಉಕ್ರೇನ್ ಮೇಲೆ ರಷ್ಯಾ ಆಕ್ರಮಣ ಮಾಡಿದರೆ ಆಗುವ ಸಂಭಾವ್ಯ ಪರಿಣಾಮಗಳ ಬಗ್ಗೆಯೂ ಈ ರಾಷ್ಟ್ರಗಳು ಯೋಚಿಸುತ್ತಿವೆ.
ಭಾರತವು "ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾಗಿದೆ ಮತ್ತು ಉಕ್ರೇನ್ ಬಿಕ್ಕಟ್ಟಿನ ಕುರಿತು 27 ರಾಷ್ಟ್ರಗಳ ಗುಂಪು ಹೊಸ ದೆಹಲಿಯೊಂದಿಗೆ ನಿರಂತರ ಸಂಪರ್ಕದಲ್ಲಿದೆ ಮತ್ತು ರಾಜತಾಂತ್ರಿಕತೆ ಮತ್ತು ಸಂಭಾಷಣೆಯ ಮೂಲಕ ಪರಿಸ್ಥಿತಿ ಶಮನಗೊಳಿಸಲು ಎಲ್ಲಾ ಮಾರ್ಗಗಳನ್ನು ಅನ್ನೇಷಿಸಲಾಗುತ್ತಿದೆ ಎಂದು ಯುರೋಪಿಯನ್ ಒಕ್ಕೂಟದ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದ್ದಾರೆ.
ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಮ್ಯೂನಿಚ್ ಭದ್ರತಾ ಸಮ್ಮೇಳನ ಮತ್ತು ಇಂಡೋ-ಪೆಸಿಫಿಕ್ ಕುರಿತ ಸಚಿವರ ಸಭೆಯಲ್ಲಿ ಭಾಗವಹಿಸಲು ಈ ವಾರ ಯುರೋಪ್‌ಗೆ ಪ್ರಯಾಣಿಸಲಿದ್ದಾರೆ. ಯೂರೋಪಿನಲ್ಲಿ ಜೈ ಶಂಕರ್ ಸಭೆಯಲ್ಲಿ ಉಕ್ರೇನ್ ಪರಿಸ್ಥಿತಿ ಅವಲೋಕಿಸಲಾಗುತ್ತದೆ. ಯುರೋಪಿಯನ್ ಒಕ್ಕೂಟ ಉಕ್ರೇನ್ ಪರವಾಗಿ ನಿಂತಿದೆ. ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದರೆ ಭಾರೀ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
ನಾವು ಭಾರತವನ್ನು ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾಗಿ ನೋಡುತ್ತೆವೆ, ನಮ್ಮ ಅಭಿಪ್ರಾಯಗಳು ಮತ್ತು ಪರಿಸ್ಥಿತಿಯನ್ನು ಮೌಲ್ಯಮಾಪನ ಮಾಡುತ್ತೇವೆ. ಮಾತುಕತೆಯ ಕಡೆಗೆ ನಮ್ಮ ಎಲ್ಲಾ ಪ್ರಯತ್ನ ಮಾಡುತ್ತಿದ್ದೇವೆ. ಆದರೆ. ನಾವು ಪಡೆಗಳು ಮತ್ತು ಶಸ್ತ್ರಾಸ್ತ್ರಗಳ ಬೃಹತ್ ಸಂಗ್ರಹಣೆಯನ್ನು ನೋಡಿದ್ದೇವೆ ಮತ್ತು ಉಕ್ರೇನ್‌ಗೆ ಸ್ಪಷ್ಟವಾಗಿ ಬೆದರಿಕೆ ಇದೆ. ಕಳೆದ ಏಳು ವರ್ಷಗಳಲ್ಲಿ, ಉಕ್ರೇನ್ ಇತರ ಆಕ್ರಮಣಗಳು, ಡಾನ್ ಬಾಸ್ ನಲ್ಲಿನ ಪರಿಸ್ಥಿತಿ ಮತ್ತಿತರ ಕಾರಣಗಳಿಂದ ತುಂಬಾ ನಲುಗಿದೆ. ಇವು ವಾಸ್ತವ ಸತ್ಯಗಳಾಗಿವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಫೆಬ್ರವರಿ 18 ಮತ್ತು 12 ರಂದು ಮೂನಿಚ್ ಭದ್ರತಾ ಸಮ್ಮೇಳನ ನಡೆಯಲಿದ್ದು, ಫೆಬ್ರವರಿ 22 ಪಂದು ಇಂಡೋ-ಪೆಸಿಫಿಕ್ ಸಚಿವರ ಸಭೆಯನ್ನು ಫ್ರಾನ್ಸ್ ಆಯೋಜಿಸಿದೆ.