ಪಾಲಕ್ಕಾಡ್: ಮಲಂಪುಳದ ಚೆರಾಟ್ ಬೆಟ್ಟದಲ್ಲಿ ಸಿಲುಕಿದ್ದ ಯುವಕನನ್ನು ರಕ್ಷಿಸಲು ಸೇನೆಯ ನೆರವು ಕೇಳಲಾಗಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇನೆಯ ನೆರವು ಕೋರಿದ್ದಾರೆ. ದಕ್ಷಿಣ ವಲಯ ಲೆಫ್ಟಿನೆಂಟ್ ಜನರಲ್ ಅರುಣ್ ಮುಖ್ಯಮಂತ್ರಿಗಳ ಕಚೇರಿಗೆ ಮಾಹಿತಿ ನೀಡಿ ನೆರವಿನ ಭರವಸೆ ನೀಡಿದ್ದಾರೆ. ಪರ್ವತಾರೋಹಣ ಮತ್ತು ಪಾರುಗಾಣಿಕಾದಲ್ಲಿ ಪರಿಣತಿ ಹೊಂದಿರುವ ತಂಡವು ರಸ್ತೆಯ ಮೂಲಕ ಹೊರಟಿದೆ ಎಂದು ತಿಳಿದುಬಂದಿದೆ. ರಾತ್ರಿ ಹೆಲಿಕಾಪ್ಟರ್ ಪ್ರಯಾಣ ಅಸಾಧ್ಯ.
ಯುವಕ ಸುಮಾರು 26 ಗಂಟೆಗಳಿಗೂ ಹೆಚ್ಚು ಕಾಲ ಕಂದರದಲ್ಲಿ ಸಿಕ್ಕಿಬಿದ್ದಿದ್ದಾನೆ. ಮಲಂಪುಳ ಮೂಲದ ಬಾಬು ಕಡಿದಾದ ಕುರ್‍ಂಪಚ್ಚಿ ಬೆಟ್ಟದಲ್ಲಿ ಸಿಕ್ಕಿಬಿದ್ದಿದ್ದಾನೆ. ಹೆಲಿಕಾಪ್ಟರ್ ಬಳಕೆ ವಿಫಲ ಯತ್ನದ ಬಳಿಕ ಸರ್ಕಾರ ಸೇನೆಯ ನೆರವು ಕೋರಿತ್ತು. ಬಾಬು ಅವರನ್ನು ಕೆಳಗಿಳಿಸಲು ಹಲವು ಸಾಧ್ಯತೆಗಳನ್ನು ಅನ್ವೇಶಿಸಲಾಗುತ್ತಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವು ಪ್ರದೇಶವನ್ನು ತಲುಪಿದೆ. ಪರ್ವತಾರೋಹಿಗಳ ಗುಂಪು ಶೀಘ್ರದಲ್ಲೇ ಪ್ರದೇಶವನ್ನು ತಲುಪುತ್ತದೆ. ಬೆಳಕಿನ ಮಬ್ಬಿನಿಂದ ರಕ್ಷಣಾ ಕಾರ್ಯಾಚರಣೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಸೋಮವಾರ ಮಧ್ಯಾಹ್ನ ಬಾಬು ಮತ್ತು ಮೂವರು ಸ್ನೇಹಿತರು ಬೆಟ್ಟ ಏರಿದ್ದರು. ಗುಡ್ಡ ಇಳಿಯುವ ಮಾರ್ಗಮಧ್ಯೆ ಬಾಬು ಕಾಲು ಜಾರಿ ಕೊರಕಲಿಗೆ ಬಿದ್ದನು. ಜೊತೆಯಲ್ಲಿದ್ದ ಸ್ನೇಹಿತರು ಮರದ ಬಳ್ಳಿ, ಕಡ್ಡಿಗಳನ್ನು ಎಸೆದರೂ ಬಾಬು ಮೇಲಕ್ಕೆ ಏರಲು ಸಾಧ್ಯವಾಗಲಿಲ್ಲ. ಸ್ನೇಹಿತರು ಬೆಟ್ಟ ಇಳಿದು ಸ್ಥಳೀಯರು ಹಾಗೂ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ನಿನ್ನೆ ರಾತ್ರಿ 12 ಗಂಟೆಗೆ ಅಗ್ನಿಶಾಮಕ ದಳ ಹಾಗೂ ಪೋಲೀಸರು ಆಗಮಿಸಿತಾದÀರೂ ಬೆಳಕಿನ ಕೊರತೆಯಿಂದ ರಕ್ಷಣಾ ಕಾರ್ಯ ನಡೆಸಲು ಸಾಧ್ಯವಾಗಲಿಲ್ಲ. ಪ್ರಸ್ತುತ ಯುವಕನಿಗೆ ನೀರು ಮತ್ತು ಆಹಾರ ನೀಡುವ ಪ್ರಯತ್ನಗಳು ನಡೆಯುತ್ತಿವೆ.