ಮುಳ್ಳೇರಿಯ: ಬೆಳ್ಳೂರು ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕುಟುಂಬಶ್ರೀ ಜಿಲ್ಲಾ ಮಿಷನ್ ನೇತೃತ್ವದಲ್ಲಿ ಜೆಂಡರ್ ಕ್ಲಬ್‍ಗಳನ್ನು ಸ್ಥಾಪಿಸುವ ಯೋಜನೆಯನ್ನು ಪ್ರಾರಂಭಿಸಿದೆ. ಕ್ರೀಡೆ, ಕಲೆ ಮತ್ತು ಸಾಹಿತ್ಯ ಮತ್ತು ಮಕ್ಕಳ ಮಾನಸಿಕ ಆರೋಗ್ಯವನ್ನು ಸುಧಾರಿಸುವ ಲಕ್ಷ್ಯವನ್ನು ಈ ಯೋಜನೆ ಹೊಂದಿದೆ. ಕುಟುಂಬಶ್ರೀ ಜಿಲ್ಲಾ ಮಿಷನ್ ಸಹಾಯಕ ಸಂಯೋಜಕ ಪ್ರಕಾಶನ್ ಪಾಲಾಯಿ ಕಾರ್ಯಕ್ರಮ ಉದ್ಘಾಟಿಸಿದರು. ಮುಖ್ಯೋಪಾಧ್ಯಾಯಿನಿ ವಾರಿಜಾ ಟೀಚರ್ ಅಧ್ಯಕ್ಷತೆ ವಹಿಸಿದ್ದರು. ಜೆಂಡರ್ ಡಿಪಿಎಂ ರೇಷ್ಮಾ. ಎಂ ಯೋಜನೆ ಬಗ್ಗೆ ವಿವರಿಸಿದರು. ಸ್ನೇಹಿತ ಯೋಜನೆಯ ಕೌನ್ಸಿಲರ್ ಶೋಭನಾ.ಇ ಮಾತನಾಡಿದರು. ಹಿರಿಯ ಶಿಕ್ಷಕ ಕುಂಞÂ್ಞ ರಾಮನ್ ಮಾಸ್ತರ್ ಸ್ವಾಗತಿಸಿ, ವಂದಿಸಿದರು.
ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪಿಟಿಎ ಪ್ರತಿನಿಧಿಗಳು ಜೆಂಡರ್ ಕ್ಲಬ್‍ನ ಕೆಲಸವನ್ನು ಉತ್ಸಾಹದಿಂದ ಕೈಗೆತ್ತಿಕೊಂಡಿರುವರು. ಜಿಲ್ಲೆಯ ಸೌಹಾರ್ದ ಜೆಂಡರ್ ಹೆಲ್ಪ್ ಡೆಸ್ಕ್ ಈ ಯೋಜನೆಯನ್ನು ನೋಡಿಕೊಳ್ಳುತ್ತದೆ.