ತ್ರಿಶೂರ್: ವಿದ್ಯಾರ್ಥಿಗಳು ಶಿಕ್ಷಕರನ್ನು ಕಾಲೇಜಿನೊಳಗೆ ಬೀಗ ಹಾಕಿ ದಿಗ್ಬಂಧನಕ್ಕೊಳಪಡಿಸಿದ ಘಟನೆ ವರದಿಯಾಗಿದೆ. ತ್ರಿಶೂರ್ ಅರನಾಟ್ಟುಕರದಲ್ಲಿರುವ ಸ್ಕೂಲ್ ಆಫ್ ಡ್ರಾಮಾದ ವಿದ್ಯಾರ್ಥಿಗಳು ಶಿಕ್ಷಕರನ್ನು ಬೀಗ ಜಡಿದು ಪ್ರತಿಭಟನೆ ನಡೆಸಿದರು. ವಿದ್ಯಾರ್ಥಿನಿಯೊಂದಿಗೆ ಅನುಚಿತವಾಗಿ ವರ್ತಿಸಿದ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಘಟನೆ ನಡೆದಿದೆ.
ನಿನ್ನೆ ರಾತ್ರಿ 11 ಗಂಟೆಯವರೆಗೆ ಶಾಲೆಯ ಶಿಕ್ಷಕರನ್ನು ದಿಗ್ಬಂಧನಕ್ಕೊಳಪಡಿಸಿದ್ದರು ಎನ್ನಲಾಗಿದೆ. ಬಳಿಕ ಆಗಮಿಸಿದ ಪೊಲೀಸರು ಅವರನ್ನು ಬಿಡುಗಡೆ ಮಾಡಿದರು. ಪ್ರತಿಭಟನೆಯ ಭಾಗವಾಗಿ ಐವರು ಶಿಕ್ಷಕರನ್ನು ವಿದ್ಯಾರ್ಥಿಗಳು ದಿಗ್ಬಂಧನದಲ್ಲಿರಿಸಿದ್ದರು. ಶಿಕ್ಷಕ ಹಾಗೂ ಇತರರಿಗೆ ಬೀಗ ಹಾಕಲಾಗಿದೆ ಎಂದು ವರದಿಯಾಗಿದೆ.
ಮೂರು ತಿಂಗಳ ಹಿಂದೆ ಘಟನೆ ನಡೆದಿತ್ತು. ಕಾಲೇಜಿಗೆ ಅತಿಥಿ ಶಿಕ್ಷಕರಾಗಿ ಬಂದವರ ವಿರುದ್ಧ ವಿದ್ಯಾರ್ಥಿನಿ ದೂರಿಕೊಂಡಿದ್ದಳು. ಇಲಾಖಾ ಮುಖ್ಯಸ್ಥರು ಸೇರಿದಂತೆ ಕಾಲೇಜು ಅಧಿಕಾರಿಗಳಿಗೆ ದೂರು ನೀಡಿದರೂ ಕ್ರಮ ಕೈಗೊಳ್ಳದಿರುವ ಬಗ್ಗೆ ವ್ಯಾಪಕ ಆಕ್ರೊಶ ವ್ಯಕ್ತವಾಯಿತು. ಇದು ನಂತರ ಐವರು ಶಿಕ್ಷಕರನ್ನು ದಿಗ್ಬಂಧನದಲ್ಲಿರಿಸಲು ಕಾರಣವಾಯಿತು. ತನಿಖೆಯ ಭಾಗವಾಗಿ ಸಂಜೆ 4 ಗಂಟೆ ಸುಮಾರಿಗೆ ಇಬ್ಬರನ್ನು ಠಾಣೆಗೆ ಕರೆಸಲಾಗಿತ್ತು.