ಗ್ಲೆನ್‌ಮಾರ್ಕ್ ಫಾರ್ಮಾಸ್ಯೂಟಿಕಲ್ಸ್ ಹಾಗೂ ಕೆನಡಾ ಮೂಲದ ಸ್ಯಾನೊಟೈಜ್ ರಿಸರ್ಜ್ ಅಂಡ್ ಡೆವಲೆಪ್‌ಮೆಂಟ್ ಕಾರ್ಪ್ ಕಂಪನಿಗಳು ಈ ಕುರಿತು ಘೋಷಿಸಿವೆ. 'ನೈಟ್ರಿಕ್ ಆಕ್ಸೈಡ್' ಒಳಗೊಂಡಿರುವ ಈ ಔಷಧ ವೈರಸ್ ನಾಶಕವಾಗಿ ಕೆಲಸ ಮಾಡುವುದು ಸಾಬೀತಾಗಿದೆ ಎಂದೂ ತಿಳಿಸಿವೆ.
ಭಾರತದಲ್ಲಿ ಈ ಔಷಧವನ್ನು ತಯಾರಿಸಲು ಹಾಗೂ ಮಾರಾಟಕ್ಕೆ ಗ್ಲೆನ್‌ಮಾರ್ಕ್ ಕಂಪನಿಗೆ ಡಿಸಿಜಿಐ ಇತ್ತೀಚೆಗೆ ಅನುಮೋದನೆ ನೀಡಿತ್ತು.
ಈ ಔಷಧವು ಸೂಕ್ಷ್ಮಾಣುಜೀವಿ ನಿರೋಧಕ ಗುಣಗಳನ್ನು ಹೊಂದಿದ್ದು, ಕೋವಿಡ್‌ಗೆ ಕಾರಣವಾಗುವ 'ಸಾರ್ಸ್-ಕೋವ್-2' ವೈರಸ್ ನಾಶ ಮಾಡುವ ಸಾಮರ್ಥ್ಯ ಹೊಂದಿದೆ. ಈ ಔಷಧವನ್ನು ಮೂಗಿನ ಹೊಳ್ಳೆಗಳಲ್ಲಿ ಸಿಂಪಡಿಸಿದಾಗ ಅದು, ವೈರಸ್‌ನ ದಾಳಿಗೆ ರಾಸಾಯನಿಕವಾಗಿ ಹಾಗೂ ಭೌತಿಕವಾಗಿ ತಡೆಗೋಡೆಯಂತೆ ಕೆಲಸ ಮಾಡುತ್ತದೆ. ಇದರಿಂದ, ಕೊರೊನಾ ವೈರಸ್ ವೃದ್ಧಿಯಾಗದಂತೆ ಹಾಗೂ ಶ್ವಾಸಕೋಶ ಪ್ರವೇಶಿಸಿ ಸೋಂಕು ಹರಡದಂತೆ ತಡೆಗಟ್ಟುತ್ತದೆ ಎಂದು ಕಂಪನಿಗಳು ಹೇಳಿವೆ.