ಕಾಸರಗೋಡು: ಜಿಲ್ಲೆಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಅಭಿವೃದ್ಧಿ ಮತ್ತು ಕಲ್ಯಾಣ ಚಟುವಟಿಕೆಗಳ ಮೊಬೈಲ್ ವಿಡಿಯೋ ಪ್ರದರ್ಶನವು ಕಾಸರಗೋಡು ಮತ್ತು ಮಂಜೇಶ್ವರ ಬ್ಲಾಕ್‍ಗಳಲ್ಲಿ ಪ್ರಯಾಣ ಆರಂಭಿಸಿತು. ಜಿಲ್ಲಾ ಮಾಹಿತಿ ಕಛೇರಿಯಿಂದ ಪ್ರದರ್ಶನ ಆಯೋಜಿಸಲಾಗಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಸಂಚಾರಿ ವೀಡಿಯೋ ವಾಹನಕ್ಕೆ ಚಾಲನೆ ನೀಡಿದರು. ಸವಲತ್ತುಗಳು ಲಭ್ಯವಿದ್ದರೂ ಅನೇಕರಿಗೆ ಸರ್ಕಾರದ ಯೋಜನೆಗಳ ಬಗ್ಗೆ ಅರಿವಿಲ್ಲ. ಸರ್ಕಾರದ ಯೋಜನೆಗಳು ಮತ್ತು ಕಾರ್ಯಚಟುವಟಿಕೆಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮೊಬೈಲ್ ವಿಡಿಯೋ ಪ್ರದರ್ಶನ ಸಹಕಾರಿಯಾಗಲಿದೆ ಎಂದು ಬೇಬಿ ಬಾಲಕೃಷ್ಣನ್ ಹೇಳಿದರು.
ಜಿಲ್ಲಾ ಪಂಚಾಯಿತಿ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ಗೀತಾ ಕೃಷ್ಣನ್, ಜಿಲ್ಲಾ ಮಾಹಿತಿ ಕಛೇರಿ ಉಪಸಂಪಾದಕ ಸುಮಿತ್ ವಿ ನಾಯರ್, ಮಾಹಿತಿ ಸಹಾಯಕ ಎ.ಪಿ.ದಿಲ್ನಾ, ವಿಷಯ ಸಂಪಾದಕ ದೀಕ್ಷಿತ್ ಕೃಷ್ಣ, ಜಿಲ್ಲಾ ಮಾಹಿತಿ ಸಿಬ್ಬಂದಿ ಟಿ.ಕೆ.ಕೃಷ್ಣನ್, ಆರ್.ಮನೋಜ್, ಕೆ.ಪ್ರಸೀತಾ, ಸುನೋಜ್ ಮ್ಯಾಥ್ಯೂ ಉಪಸ್ಥಿತರಿದ್ದರು.
ಜಿಲ್ಲಾ ವಾರ್ತಾಧಿಕಾರಿ ಎಂ ಮಧುಸೂದನನ್ ಸ್ವಾಗತಿಸಿ, ಸಹಾಯಕ ಮಾಹಿತಿ ಅಧಿಕಾರಿ ಇ ಕೆ ನಿಧೀಶ ವಂದಿಸಿದರು.
ಎಲ್‍ಇಡಿ ಪರದೆಯನ್ನು ಹೊಂದಿರುವ ಈ ವಾಹನವು ಫೆಬ್ರವರಿ 21 ರಿಂದ 25 ರವರೆಗೆ ರಾಜ್ಯ ಸರ್ಕಾರದ ಅಭಿವೃದ್ಧಿ ಮತ್ತು ಕಲ್ಯಾಣ ಯೋಜನೆಗಳ ಕಿರುಚಿತ್ರ ಪ್ರದರ್ಶನದೊಂದಿಗೆ ಕಾಸರಗೋಡು ಮಂಜೇಶ್ವರ ಬ್ಲಾಕ್‍ಗಳಲ್ಲಿ ಸಂಚರಿಸಲಿದೆ. ಕನ್ನಡ, ತುಳು ಮತ್ತು ಮಲಯಾಳಂನಲ್ಲಿ ಅಭಿವೃದ್ಧಿ ಸಾಧನೆಗಳ ಕಿರು ವೀಡಿಯೋ ಪ್ರದರ್ಶಿಸಲಾಗುವುದು. ಸೋಮವಾರ ಕಾಸರಗೋಡು, ಚೆರ್ಕಳ, ಬೋವಿಕ್ಕಾನ, ಕಮರ್ಂತೋಡಿ, ಮುಳ್ಳೇರಿಯ, ನಾರಂಪಾಡಿ, ಮಾರ್ಪನಡ್ಕ, ನಾಟೆಕಲ್ಲು, ಬೆಳ್ಳೂರು, ಕಿನ್ನಿಂಗಾರ್ ಮತ್ತು ವಾಣಿನಗರದಲ್ಲಿ ಪ್ರವಾಸ ಮುಕ್ತಾಯಗೊಳ್ಳಲಿದೆ.