ತಿರುವನಂತಪುರ: ಜನರ ಕಣ್ಣೀರು ಸುರಿಸಿ ಕೆ ರೈಲು ಯೋಜನೆ ಜಾರಿಗೆ ತರುವುದಿಲ್ಲ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಕೊಡಿಯೇರಿ ಬಾಲಕೃಷ್ಣನ್ ಹೇಳಿದ್ದಾರೆ. ಮೊದಲು ಯೋಜನೆ ಜಾರಿಗೊಳಿಸಲು ಒಮ್ಮತ ಮೂಡಿಸಲಾಗುವುದು ಎಂದ ಅವರು, ಯೋಜನೆ ವಿರೋಧಿಸುವವರ ಜತೆ ಮುಕ್ತ ಚರ್ಚೆಗೆ ಸಿದ್ಧ ಎಂದಿರುವರು.
ಅಭಿವೃದ್ಧಿಯಲ್ಲಿ ಕೇರಳ ಮಾದರಿಯಾಗಿದೆ. ಪರಿಸರವನ್ನು ರಕ್ಷಿಸುವ ಅಭಿವೃದ್ಧಿ ಚಟುವಟಿಕೆಗಳೇ ಎಡಪಕ್ಷಗಳ ನೀತಿ. ಕೆ ರೈಲ್ ಅಂತಹ ಒಂದು ಯೋಜನೆಯಾಗಿದೆ ಎಂದು ಅವರು ತಿಳಿಸಿದರು.
ಯುಡಿಎಫ್ ನಿಲುವು ಬದಲಿಸಲು ಕೆ.ಸುಧಾಕರನ್ ಮುಂದಾಗಬೇಕು ಎಂದ ಅವರು, ಕೇಂದ್ರದ ಅನುಮೋದನೆಗೆ ಎಲ್ಲ ಸಂಸದರು ಒಗ್ಗಟ್ಟಾಗಿ ಶ್ರಮಿಸಿ ನಕಾರಾತ್ಮಕ ನಿಲುವು ಬದಲಿಸಬೇಕು ಎಂದರು.
ತಾನು ಮತ್ತು ಕೆ ಸುಧಾಕರನ್ ಕಣ್ಣೂರು ವಿಮಾನ ನಿಲ್ದಾಣದ ವಿಚಾರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಕೆ ರೈಲು ಯೋಜನೆ ವಿಚಾರದಲ್ಲಿ ಸುಧಾಕರನ್ ಅವರೂ ಇದೇ ನಿಲುವು ತಳೆಯಬೇಕು ಎಂದು ಆಗ್ರಹಿಸಿದರು.