ತ್ರಿಶೂರ್: ಪುದುಕ್ಕಾಡ್ ನಲ್ಲಿ ನಿನ್ನೆ ಅಪರಾಹ್ನ ಸರಕು ಸಾಗಣೆ ರೈಲು ಹಳಿತಪ್ಪಿದ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ನಾಲ್ಕು ರೈಲುಗಳನ್ನು ರದ್ದುಗೊಳಿಸಲಾಗಿದೆ. ವೇನಾಡ್ ಸೇರಿದಂತೆ ನಾಲ್ಕು ರೈಲುಗಳನ್ನು ರದ್ದುಗೊಳಿಸಲಾಗಿದೆ.
ರದ್ದುಗೊಂಡ ರೈಲುಗಳು:
ಎರ್ನಾಕುಲಂ-ಗುರುವಾಯೂರ್ ಪ್ಯಾಸೆಂಜರ್
ಎರ್ನಾಕುಲಂ-ಶೋರ್ನೂರ್ ಪ್ಯಾಸೆಂಜರ್
ನಿಲಂಬೂರ್-ಕೊಟ್ಟಾಯಂ ಪ್ಯಾಸೆಂಜರ್
ವೇನಾಡ್ ಎಕ್ಸ್‍ಪ್ರೆಸ್
ಭಾಗಶಃ ರದ್ದು:
ಎರ್ನಾಕುಲಂ-ಪಾಲಕ್ಕಾಡ್ ಮೆಮು ಸೇವೆಯನ್ನು ಆಲುವಾದಲ್ಲಿ ಕೊನೆಗೊಳಿಸಲಾಗುತ್ತದೆ.
ನಿಲಂಬೂರ್-ಕೊಟ್ಟಾಯಂ ಎಕ್ಸ್‍ಪ್ರೆಸ್ ಅನ್ನು ಶೋರ್ನೂರ್‍ನಲ್ಲಿ ನಿಲ್ಲಿಸಲಾಗುತ್ತದೆ.
ತಡವಾದ ರೈಲುಗಳು:
ನವದೆಹಲಿ-ತಿರುವನಂತಪುರಂ ಕೇರಳ ಎಕ್ಸ್‍ಪ್ರೆಸ್
ಬೆಂಗಳೂರು-ಎರ್ನಾಕುಲಂ ಇಂಟರ್‍ಸಿಟಿ
ಕೋಝಿಕ್ಕೋಡ್- ತಿರುವನಂತಪುರಂ ಜನಶತಾಬ್ದಿ
ಪುದುಕ್ಕಾಡ್-ಒಲ್ಲೂರಿನಲ್ಲಿ ಸರಕು ಸಾಗಣೆ ರೈಲಿನ ಎಂಜಿನ್ ಮತ್ತು ನಾಲ್ಕು ಬೋಗಿಗಳು ಹಳಿತಪ್ಪಿದವು. ತ್ರಿಶೂರ್-ಎರ್ನಾಕುಲಂ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಂಡಿದೆ. ಶುಕ್ರವಾರ ಮಧ್ಯಾಹ್ನ 02.10ಕ್ಕೆ ಈ ಘಟನೆ ನಡೆದಿದೆ.
ಸರಕು ಸಾಗಣೆ ರೈಲು ತ್ರಿಶೂರ್‍ನಿಂದ ಎರ್ನಾಕುಲಂಗೆ ತೆರಳುತ್ತಿತ್ತು. ಹಳಿ ತಪ್ಪಲು ಕಾರಣ ಸ್ಪಷ್ಟವಾಗಿಲ್ಲ. ಹಳಿತಪ್ಪಿದ ಬೋಗಿಗಳನ್ನು ಬದಲಾಯಿಸಲು ಕನಿಷ್ಠ ಹತ್ತು ಗಂಟೆ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಆಗ ಮಾತ್ರ ದ್ವಿಮುಖ ಸಂಚಾರ ಸಂಪೂರ್ಣ ಪುನಶ್ಚೇತನಗೊಳ್ಳಲಿದೆ. ರೈಲು ಸಂಚಾರ ಅಸ್ತವ್ಯಸ್ತಗೊಂಡಿರುವುದರಿಂದ ಎರ್ನಾಕುಲಂ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ದಟ್ಟಣೆ ಉಂಟಾಗಿದೆ.