ಸಂಗೀತಕ್ಕೆ ಭಾಷೆಯಿಲ್ಲ.. ಒಂದು ಮಧುರವಾದ ಸಂಗೀತ ಕಿವಿಗೆ ಬಿದ್ದರೆ ಅದು ನಮಗೆ ಅರ್ಥವಾಗದ ಭಾಷೆಯಾದರೂ ಕೂಡ ನಾವು ಕಿವಿಕೊಟ್ಟು ಕೇಳುತ್ತೇವೆ. ಅದುವೇ ಸಂಗೀತಕ್ಕಿರುವ ಮ್ಯಾಜಿಕ್. ಗರ್ಭಿಣಿ ಸಂಗೀತ ಕೇಳಿದರೆ ಹೊಟ್ಟೆಯಲ್ಲಿರುವ ಮಗುವಿನ ಚಲನೆ ಗರ್ಭಿಣಿಯ ಅನುಭವಕ್ಕೆ ಬರುವುದು.
ಎಂಥದ್ದೇ ನೋವಾದರೂ ಅದನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ. ಇದೀಗ ಕಾಡು ಪ್ರಾಣಿಯಾದ ನರಿ ಮ್ಯೂಸಿಕ್ ಕೇಳಿ ಬಂದು ಆಲಿಸಿರುವ ವೀಡಿಯೋ 10 ಮಿಲಿಯನ್‌ಗಿಂತಲೂ ಅಧಿಕ ವ್ಯೂವ್ಸ್ ಕಂಡಿದೆ.
ಅಮೆರಿಕದ ಸಾಂಪ್ರದಾಯಿಕ ವಾದ್ಯವಾದ ಬಂಜೋವನ್ನು ನುಡಿಸುವಾಗ ನರಿಯೊಂದು ಬಂದು ಆಲಿಸಿರುವ ವೀಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಲಾಗಿದ್ದು ಈ ವೀಡಿಯೋಗೆ 10 ಲಕ್ಷಕ್ಕೂ ಅಧಿಕ ವ್ಯೂವ್ಸ್ ಬಂದಿದ್ದು ವೈರಲ್ ಆಗಿದೆ.
ಆ್ಯಂಟಿ ಟೋರ್ನ್ ಎಂಬವವರು ಕಾಡಿನಲ್ಲಿ ನಿಂತು ಬಂಜೋ ನುಡಿಸುತ್ತಿದ್ದರು, ಆಗ ಅವರ ಮುಂದೆ ಬರುವ ನರಿಯೊಂದು ಕೂತು ಅವರ ನುಡಿಸುತ್ತಿರುವ ಸಂಗೀತವನ್ನು ಆಲಿಸುತ್ತಾ ಕೂರುತ್ತದೆ.
ಇದವರೆಗೆ ಸಂಗೀತವನ್ನು ಕೇಳದೇ ಇದ್ದ ಗುಳ್ಳೆನರಿ ಸಂಗೀತವನ್ನು ಆಲಿಸುತ್ತಿರುವ ಮನೋಹರ ದೃಶ್ಯ ವೀಕ್ಷಕರ ಮನ ಗೆದ್ದಿದೆ.