ಮುಂಬೈ: ಮೊದಲ ಪತ್ನಿಗೆ ವಿಚ್ಛೇದನ ಕೊಡದೇ ಇನ್ನೊಂದು ಮದುವೆಯಾದರೆ ಅದು ಕಾನೂನಿನ ಪ್ರಕಾರ ಅಪರಾಧ. ಒಂದು ವೇಳೆ ಮೊದಲ ಪತ್ನಿ ಈ ಕುರಿತು ಕೇಸು ದಾಖಲು ಮಾಡಿದರೆ ಪತಿಗೆ ಶಿಕ್ಷೆಯಾಗುತ್ತದೆ. ಅಂಥದ್ದೇ ಇನ್ನೊಂದು ತೀರ್ಪನ್ನು ಇದೀಗ ಮುಂಬೈ ಹೈಕೋರ್ಟ್ ನೀಡಿದೆ.
ಮುಂಬೈ: ಮೊದಲ ಪತ್ನಿಗೆ ವಿಚ್ಛೇದನ ಕೊಡದೇ ಇನ್ನೊಂದು ಮದುವೆಯಾದರೆ ಅದು ಕಾನೂನಿನ ಪ್ರಕಾರ ಅಪರಾಧ. ಒಂದು ವೇಳೆ ಮೊದಲ ಪತ್ನಿ ಈ ಕುರಿತು ಕೇಸು ದಾಖಲು ಮಾಡಿದರೆ ಪತಿಗೆ ಶಿಕ್ಷೆಯಾಗುತ್ತದೆ. ಅಂಥದ್ದೇ ಇನ್ನೊಂದು ತೀರ್ಪನ್ನು ಇದೀಗ ಮುಂಬೈ ಹೈಕೋರ್ಟ್ ನೀಡಿದೆ.
ಮೊದಲ ಪತ್ನಿಗೆ ಡಿವೋರ್ಸ್ ಕೊಡದೇ ಪುರುಷ ಇನ್ನೊಂದು ಮದುವೆಯಾಗಿದ್ದರೆ, ಆ ಎರಡನೆಯ ಪತ್ನಿ ಗಂಡನ ಪಿಂಚಣಿ ಅರ್ಹಳಲ್ಲ ಎಂದು ಕೋರ್ಟ್ ಹೇಳಿದೆ. ಒಂದು ವೇಳೆ ಮೊದಲ ಪತ್ನಿ ಡಿವೋರ್ಸ್ ಪಡೆದುಕೊಳ್ಳದೇ ಮೃತಪಟ್ಟರೂ, ಎರಡನೆಯ ಪತ್ನಿಗೆ ಪಿಂಚಣಿ ಪಡೆಯುವ ಅಧಿಕಾರವಿಲ್ಲ ಎಂದು ಮುಂಬೈ ಹೈಕೋರ್ಟ್‌ನ ನ್ಯಾಯಮೂರ್ತಿಗಳಾದ ಶಾರುಖ್ ಕಥಾವಾಲಾ ಮತ್ತು ಮಿಲಿಂದ್ ಜಾಧವ್ ಅವರಿದ್ದ ಪೀಠ ಹೇಳಿದೆ.
ಏನಿದು ಪ್ರಕರಣ?
ಸೊಲ್ಲಾಪುರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿರುವ ಮಹಾದೇವ ತಾಟೆ ಎಂಬುವವರು ಎರಡು ಮದುವೆಯಾಗಿದ್ದರು. ಮೊದಲನೆಯಾಕೆಗೆ ಡಿವೋರ್ಸ್ ಕೊಡದೇ ಮಹಾದೇವ ಶಾಮಲಾ ಎನ್ನುವವರನ್ನು ಮದುವೆಯಾಗಿದ್ದರು. ಮಹಾದೇವ ಅವರು ಅನಾರೋಗ್ಯದಿಂದ ಮೃತಪಟ್ಟಾಗ ಮೊದಲನೆಯ ಪತ್ನಿಗೆ ಅವರ ಪಿಂಚಣಿ ಸಿಗುತ್ತಿತ್ತು. ಕೆಲ ವರ್ಷದ ಬಳಿಕ ಅವರೂ ನಿಧನರಾದರು.
ಇದಾಗಲೇ ಮೂರು ಮಕ್ಕಳ ತಾಯಿಯಾಗಿದ್ದ ಎರಡನೆಯ ಪತ್ನಿ ಶಾಮಲಾ ತನಗೆ ಪಿಂಚಣಿ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಸರ್ಕಾರ ಅದನ್ನು ನಿರಾಕರಿಸಿತ್ತು. ಇಡೀ ಸಮಾಜ ನಮ್ಮನ್ನೇ ದಂಪತಿ ಎಂದು ಗುರುತಿಸುತ್ತಿತ್ತು. ನಮ್ಮ ಮದುವೆಯಿಂದ ಮೂರು ಮಕ್ಕಳಿದ್ದಾರೆ. ಮೊದಲನೆಯ ಪತ್ನಿ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪಿಂಚಣಿ ನನಗೆ ನೀಡಿ ಎಂದು ಶಾಮಲಾ ಮಾಡಿಕೊಂಡ ಮನವಿಗೆ ಸರ್ಕಾರ ಸ್ಪಂದಿಸಿರಲಿಲ್ಲ. ಆದ್ದರಿಂದ ಆಕೆ ಹೈಕೋರ್ಟ್ ಮೊರೆ ಹೋಗಿದ್ದರು.
ಮಹಾದೇವ ಅವರು ಮೊದಲ ಪತ್ನಿಗೆ ಡಿವೋರ್ಸ್ ಕೊಡದೇ ಇನ್ನೊಂದು ಮದುವೆಯಾಗಿರುವ ಹಿನ್ನೆಲೆಯಲ್ಲಿ ಯಾವುದೇ ಕಾರಣಕ್ಕೂ ಎರಡನೆಯವಳು ಪಿಂಚಣಿಗೆ ಅರ್ಹಳಲ್ಲ. ಸರ್ಕಾರ ಹೇಳಿರುವುದು ಸರಿಯಾಗಿದೆ. ಸಮಾಜ ದಂಪತಿ ಎಂದು ಗುರುತಿಸಿದ್ದರೂ, ಮೂರು ಮಕ್ಕಳು ಹುಟ್ಟಿದ್ದರೂ ಕಾನೂನಿನ ಪ್ರಕಾರ ಇದು ಅಸಿಂಧುವಾಗಿರುವ ಮದುವೆ. ಆದ್ದರಿಂದ ಪಿಂಚಣಿ ಕೊಡಲಾಗದು ಎಂದಿದೆ.