ಕಾಸರಗೋಡು: ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ ಎಡನೀರು ಸಂಸ್ಥೆಯ ನೇತೃತ್ವದಲ್ಲಿ ಕನ್ನಡ ಗಡಿಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ “ಭಾವಸಂಗಮ- ಕನ್ನಡ ಭಾವಗೀತೆಗಳ ಸ್ಪರ್ಧೆ” ಈಗಾಗಲೇ ನಡೆದಿದ್ದು ಸುಮಾರು ನೂರೈವತ್ತಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದಾರೆ.
ಮೊದಲ ವಿಭಾಗದಲ್ಲಿ (ಹತ್ತು ವರ್ಷದ ಒಳಗಿನವರು) ಸಂವೃತಾ ಭಟ್ ಪ್ರಥಮ , ಅವನೀ ಎಸ್.ವಿ. ದ್ವಿತೀಯ , ಅವನೀ ಭಟ್ ಹಾಗೂ ಅನುಶ್ರೀ ಎಮ್. ತೃತೀಯ ಬಹುಮಾನ ಗಳಿಸಿರುತ್ತಾರೆ.
ಎರಡನೆಯ ವಿಭಾಗದಲ್ಲಿ (ಹತ್ತರಿಂದ ಇಪ್ಪತ್ತು ವರ್ಷದ ಒಳಗಿನವರು) ಪ್ರಥಮ ತನ್ಮಯೀ ಉಪ್ಪಂಗಳ, ದ್ವಿತೀಯ ಅನ್ವಿತಾ ತಲ್ಪನಾಜೆ ಹಾಗೂ ವೈದೇಹಿ ತೃತೀಯ ಅಮೃತಾ ಎಸ್.ವಿ. ಬಹುಮಾನ ಗಳಿಸಿರುತ್ತಾರೆ.
ಮೂರನೆಯ ವಿಭಾಗದಲ್ಲಿ (ಇಪ್ಪತ್ತು ವರ್ಷದ ಮೇಲ್ಪಟ್ಟವರು)ರೇಖಾ ಸಂದೀಪ್ ಪ್ರಥಮ, ದ್ವಿತೀಯ ಸುಮಾ ಹೆಗಡೆ ಹಾಗೂ ಚೇತನಾ ಭಟ್, ಸುಪ್ರಿಯಾ ಕಜಮಲೆ ಹಾಗೂ ಸ್ವಾತೀ ಸಮನ್ವಿತಾ ತೃತೀಯ ಬಹುಮಾನ ಗಳಿಸಿದ್ದಾರೆ.
ಫೆಬ್ರವರಿ 12 ರಂದು ಸಂಜೆ 4 ಗಂಟೆಗೆ ಎಡನೀರಿನಲ್ಲಿ ನಡೆಯುವ ಭಾವಸಂಗಮ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿವೃತ್ತ ಸೇನಾ ಕಮಾಂಡೋ ಶ್ಯಾಮರಾಜ್ ಎ.ವಿ. ವಹಿಸಲಿದ್ದಾರೆ. ಅತಿಥಿಗಳಾಗಿ ಸಾಹಿತಿ ಪ್ರಸನ್ನ ವಿ.ಚೆಕ್ಕೆಮನೆ ಉಪಸ್ಥಿತರಿರುವರು. ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರು ಗಡಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಗಳಾದ ಪ್ರಕಾಶ್ ಮತ್ತಿಹಳ್ಳಿ ಭಾಗವಹಿಸುವರು.
ವಿಜೇತರಾದವರಿಗೆ ತಲಾ ಪ್ರಥಮ ಮೂರು ಸಾವಿರ ರೂಪಾಯಿ ,ದ್ವಿತೀಯ ಎರಡು ಸಾವಿರ ರೂಪಾಯಿ ಹಾಗೂ ತೃತೀಯ ಒಂದು ಸಾವಿರ ರೂಪಾಯಿ ನಗದು , ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಲಾಗುವುದು. ಸಭಾ ಕಾರ್ಯಕ್ರಮದ ನಂತರ ಭಾವಗೀತೆಗಳ ಗಾಯನ ಹಾಗೂ ನರ್ತನ ಕಾರ್ಯಕ್ರಮ ನಡೆಯಲಿದೆ.