ಚತ್ತೀಸ್ ಗಢ: ಚತ್ತೀಸ್ ಗಢದಲ್ಲಿ ನಕ್ಸಲರು ಇಂಜಿನಿಯರ್ ಓರ್ವರನ್ನು ಅಪಹರಿಸಿದ್ದು ಆತನನ್ನು ಹುಡುಕಲು ಆತನ ಪತ್ನಿ ಮಗುವಿನೊಂದಿಗೆ ಕಾಡಿಗೆ ಹೊರಟಿದ್ದಾರೆ.
ಸೋನಾಲಿ ಪವಾರ್ ತನ್ನ ಪತಿಯನ್ನು ಬಿಡುಗಡೆ ಮಾಡುವಂತೆ ಭಾವನಾತ್ಮಕ ಮನವಿ ಮಾಡಿದ್ದರು. ಆದರೆ ಈಗ ಖುದ್ದು ತಾವೇ ತಮ್ಮ ಮಗುವಿನೊಂದಿಗೆ ಪತಿಯನ್ನು ಹುಡುಕಿ ಅಬುಜ್ಮದ್ ಅರಣ್ಯ ಪ್ರವೇಶಿಸಿದ್ದರು.
ಈ ನಡುವೆ ಅಪಹರಣಗೊಂಡಿದ್ದ ಇಂಜಿನಿಯರ್ ಅಶೋಕ್ ಪವಾರ್ ಹಾಗೂ ನೌಕರ ಆನಂದ್ ಯಾದವ್ ಅವರನ್ನು ಯಾವುದೇ ಅಪಾಯವಾಗದೇ ಅಲ್ಟ್ರಾಗಳು ಬಿಡುಗಡೆ ಮಾಡಿದ್ದಾರೆ. ಅಶೋಕ್ ಪವಾರ್ ಹಾಗೂ ಯಾದವ್ ಅವರನ್ನು ಕುತ್ರು ಬಿಜಾಪುರ್ ನಲ್ಲಿರಿಸಲಾಗಿದೆ ಎಂದು ಹೆಚ್ಚುವರಿ ಎಸ್ ಪಿ ಪಂಕಜ್ ಶುಕ್ಲಾ ಬುಧವಾರದಂದು ತಿಳಿಸಿದ್ದಾರೆ.
ಆದರೆ ಸೋನಾಲಿ ಇನ್ನೂ ಅರಣ್ಯದಲ್ಲೇ ಇದ್ದು, ಸ್ಥಳೀಯ ಪತ್ರಕರ್ತರು ಹಾಗೂ ಪೊಲೀಸ್ ಅಧಿಕಾರಿಗಳ ಜೊತೆ ಸಂಪರ್ಕದಲ್ಲಿದ್ದಾರೆ. ಶೀಘ್ರವೇ ಪತಿಯನ್ನು ಭೇಟಿ ಮಾಡಲು ಆಕೆಗೆ ಸಾಧ್ಯವಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.