ಮಧೂರು: ಮಧೂರು ಪಂಚಾಯತಿ ವ್ಯಾಪ್ತಿಯ ಉಳಿಯ ಬಕ್ಕತ್ತಿಮಾರ್ ಎಂಬಲ್ಲಿ ಒಂದು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಹಿನ್ನೀರನ್ನು ಕಾಸರಗೋಡು ಬ್ಲಾಕ್ ಪಂಚಾಯತಿ ವತಿಯಿಂದ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ `28.76 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗುತ್ತಿದೆ.
ಆರು ಮೀಟರ್ ಆಳದಲ್ಲಿದ್ದ ಕೆರೆಯ ಮಣ್ಣಿನ ಗೋಡೆ ತೆಗೆದು ಗ್ರಾನೈಟ್ ನಿಂದ ತಡೆಗೋಡೆ ನಿರ್ಮಿಸಲಾಗಿದೆ. ಜೊತೆಗೆಗೆ ಕೆರೆಯ ಸುತ್ತಲೂ ಬೆಳಗ್ಗಿನ ಸಂಚಾರಕ್ಕಾಗಿ ನಡೆದು ಸಾಗುವ ಪ್ರತ್ಯೇಕ ಕಾಲುದಾರಿ ಅಳವಡಿಸಲಾಗುತ್ತದೆ. ಬ್ಲಾಕ್ ಪಂಚಾಯಿತಿ ಅಧ್ಯಕ್ಷೆ ಸಿ.ಎ.ಸೈಮಾ ಮಾತನಾಡಿ, ಕೆರೆಗೆ ಹೊಂದಿಕೊಂಡಂತೆ ಉದ್ಯಾನವನ ಹಾಗೂ ಉದ್ಯಾನವನದೊಂದಿಗೆ ಪ್ರವಾಸಿ ತಾಣವನ್ನಾಗಿ ಮಾಡಲು ಬ್ಲಾಕ್ ಪಂಚಾಯಿತಿ ಸಿದ್ಧತೆ ನಡೆಸಿದ್ದು, ಆರು ತಿಂಗಳೊಳಗೆ ಯೋಜನೆ ನನಸಾಗಲಿದೆ ಎಂದಿರುವರು.