HEALTH TIPS

ಮೊಗ್ರಾಲ್ ದೇಶೀಯ ವೇದಿಯಿಂದ ನಾಳೆ ಗ್ರಾಮ ಸಂಚಾರ ಜಾಗೃತಿ ಕಾರ್ಯಕ್ರಮ

      ಕುಂಬಳೆ:  ಹೆಚ್ಚುತ್ತಿರುವ ಅಮಲು ಪದಾರ್ಥ ಬಳಕೆಯ ವಿರುದ್ಧ ಮೊಗ್ರಾಲ್ ದೇಶೀಯ ವೇದಿ ಸಂಘಟನೆ ಆಯೋಜಿಸಿರುವ ಜಾಗೃತಿ ಅಭಿಯಾನದ ಅಂಗವಾಗಿ, ಪೋಲೀಸರು, ಅಬಕಾರಿ ಇಲಾಖೆಗಳು, ಶಾಲಾ ಪಿಟಿಎ ಸಮಿತಿಗಳು, ಜಮಾತ್ ಸಮಿತಿಗಳು, ಎನ್‍ಜಿಒಗಳು ಮತ್ತು ಸ್ಥಳೀಯರ ಸಹಯೋಗದಲ್ಲಿ ಅಮಲುಮುಕ್ತ ಮೊಗ್ರಾಲ್ ಎಂಬ ಪರಿಕಲ್ಪನೆಯೊಂದಿಗೆ ಗ್ರಾಮ ಸಂಚಾರ ಎಂಬ ಜಾಗೃತಿ ಯಾತ್ರೆ ಆಯೋಜಿಸಿದೆ. ನಾಲಕೆ ಒಂದು ದಿನದ ಪಾದಯಾತ್ರೆ ಹಮ್ಮಿಕೊಳ್ಳಲಾಗಿದ್ದು, ಇದಕ್ಕಾಗಿ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ದೇಶೀಯ ವೇದಿಯ ಪದಾಧಿಕಾರಿಗಳು ಕುಂಬಳೆಯಲ್ಲಿ ಆಯೋಜಿಸಿದ  ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
                    ನಾಳೆ ಬೆಳಿಗ್ಗೆ 10 ಕ್ಕೆ ಪೇರಾಲು ಯುನೈಟೆಡ್ ಕ್ಲಬ್ ಪರಿಸರದಿಂದ ಜಾಗೃತಿ ಪಾದಯಾತ್ರೆ ಆರಂಭವಾಗಲಿದೆ. ಮಂಜೇಶ್ವರ ಶಾಸಕ ಎಕೆಎಂ ಅಶ್ರಫ್ ಉದ್ಘಾಟಿಸುವರು.  ದೇಶೀಯ ವೇದಿ  ಅಧ್ಯಕ್ಷ ಎ.ಎಂ.ಸಿದ್ದೀಕ್ ರಹಮಾನ್ ಅಧ್ಯಕ್ಷತೆ ವಹಿಸುವರು ಜಿಲ್ಲಾ ಪೋಲೀಸ್ ವರಿಷ್ಠ ಡಾ.ವೈಭವ್ ಸಕ್ಸೇನಾ ಧ್ವಜಾರೋಹಣ ನೆರವೇರಿಸುವರು. ಡಿವೈಎಸ್ಪಿ ಬಾಲಕೃಷ್ಣನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ವಿಮುಕ್ತಿ ಜಿಲ್ಲಾ ಸಮನ್ವಯಾಧಿಕಾರಿ ಹಾಗೂ ಅಬಕಾರಿ ತಡೆ ಅಧಿಕಾರಿ ಎನ್.ಜಿ.ರಘುನಾಥನ್ ಮಾದಕ ವಸ್ತು ವಿರೋಧಿ ಸಂದೇಶ ನೀಡಲಿದ್ದಾರೆ. ಪ್ರಧಾನ ಕಾರ್ಯದರ್ಶಿ ಟಿ.ಕೆ.ಜಾಫರ್ ಉಪಸ್ಥಿತರಿರುವರು.
                ಈ ಸಂದರ್ಭದಲ್ಲಿ ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷೆ ತಾಹಿರಾ ಯೂಸುಫ್, ಉಪಾಧ್ಯಕ್ಷ ನಾಸರ್ ಮೊಗ್ರಾಲ್, ಬ್ಲಾಕ್ ಪಂಚಾಯತಿ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್ ಕಾರ್ಲೆ, ಜಿಲ್ಲಾ ಪಂಚಾಯತಿ ಸದಸ್ಯೆ ಜಮೀಲಾ ಸಿದ್ದೀಕ್, ಬ್ಲಾಕ್ ಪಂಚಾಯತಿ ಸದಸ್ಯೆ ಜೀನತ್ ನಝೀರ್ ಕಲ್ಲಂಗೈ, ಕುಂಬಳೆ ಸಮುದಾಯ ಆರೋಗ್ಯ ಕೇಂದ್ರದ  ವೈದ್ಯಾಧಿಕಾರಿ ಡಾ.ದಿವಾಕರ ರೈ, ಮೊಗ್ರಾಲ್ ಯುನಾನಿ ಡಿಸ್ಪೆನ್ಸರಿ ವೈದ್ಯಾಧಿಕಾರಿ ಡಾ.ಝಾಕಿರಲಿ, ವಾರ್ಡ್ ಸದಸ್ಯ ಶಂಶೀರ್, ಮೊಗ್ರಾಲ್ ಜಿ.ವಿ.ಹೆಚ್.ಎಸ್.ಎಸ್ ಪಿಟಿಎ ಅಧ್ಯಕ್ಷ ಸಯ್ಯದ್ ಹಾದಿ ತಂಙಳ್, ಪ್ಯಾರಲ್ ಶಾಲೆ ಪಿಟಿಎ ಅಧ್ಯಕ್ಷ ಮುಹಮ್ಮದ್ ಬಿ.ಎ, ಕುಂಬಳೆ ಸಿಎಚ್‍ಸಿ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಪೇರಾಲ್ ಯುನೈಟೆಡ್ ಕ್ಲಬ್ ಅಧ್ಯಕ್ಷ ರಫಿಮಜ್ಜಿ,  ಖತೀಬ್ ಕೆ.ಎಲ್.ಅಬ್ದುಲ್ ಖಾದಿರ್ ಅಲ್ ಖಾಸಿಮಿ, ಹೋಮಿಯೋಪತಿ ವೈದ್ಯೆ ಡಾ.ಪ್ರಸೀತಾ. ನಿಸಾರ್ ಪೆರ್ವಾಡ್, ಎಕೆ ಆರಿಫ್, ಎಂಎ ಹಮೀದ್ ಸ್ಪೈಕ್, ಜೆಡ್ ಎ ಮೊಗ್ರಾಲ್, ಟಿಎಂ ಶುಹೈಬ್ ಮತ್ತು ಹಮೀದ್ ಕಾವಿಲ್ ಉಪಸ್ಥಿತರಿರುವರು.
                    ನಂತರ ಮಡಿಮೊಗರು ಮೂಲಕ ಕುತುಬ್ ನಗರÀ, ಎಫ್‍ಸಿಕೆ ಕ್ಲಬ್ ಆವರಣ, ಮೈಮೂನ್ ನಗರ, ಜುಮಾ ಮಸೀದಿ ಆವರಣ, ಬದ್ರಿಯಾನಗರ ಜಂಕ್ಷನ್, ಕೋಟ ರಸ್ತೆ,  ಕೊಟ್ಟಾಯಂ ಕ್ಲಬ್ ಆವರಣ, ಪೆರ್ವಾಡ್ ಅಯ್ಯಪ್ಪಸ್ವಾಮಿ ಭಜನಾ ಮಂದಿರ, ಮಣಿಕಂಠ ಕ್ಲಬ್ ಆವರಣ, ನಡುಪ್ಪಾಲ ಮಸೀದಿ ಆವರಣ, ಶಾಲೆ, ಚಳಿಯಂಗೋಡ್ ಮೂಲಕ ಹಾದು ಹೋಗಲಿದೆ. ಮಿಲಾದ್ ನಗರ, ಕೊಪ್ಪಳ ಜಂಕ್ಷನ್, ಗಾಂಧಿನಗರ ಮತ್ತು ಪೆರ್ವಾಡ್ ಕಡಪ್ಪುರ ಜಂಕ್ಷನ್ ನಲ್ಲಿ  ಸಂಜೆ 7 ಗಂಟೆಗೆ ಕೊನೆಗೊಳ್ಳುತ್ತದೆ. ಅಬಕಾರಿ ಅಧಿಕಾರಿಗಳಾದ ದಿಪಿನ್ ಕುಮಾರ್ ಎ, ದಿವಾಕರನ್ ಎನ್ ವಿ, ಜನಾರ್ದನನ್ ಮತ್ತು ನಜರುದ್ದೀನ್ ಮೊಗ್ರಾಲ್ ವಿವಿಧೆಡೆ ಜಾಗೃತಿ ತರಗತಿ ನಡೆಸಲಿದ್ದಾರೆ. ವಿವಿಧ ಸ್ಥಳಗಳಲ್ಲಿ ಮುಖ್ಯ ಅತಿಥಿಗಳಾಗಿ ಜನಪ್ರತಿನಿಧಿಗಳು ಸಾಮಾಜಿಕ, ಸಾಂಸ್ಕøತಿಕ ಮುಖಂಡರು ಭಾಗವಹಿಸಲಿದ್ದಾರೆ.    ಧಾರ್ಮಿಕ, ಶಿಕ್ಷಣ, ಆರೋಗ್ಯ ಕ್ಷೇತ್ರದ ಪ್ರಮುಖರು ವಿವಿಧೆಡೆ ಮಾದಕ ವಸ್ತು ವಿರೋಧಿ ಸಂದೇಶ ಸಾರಲಿದ್ದಾರೆ.
               ಸಮಾರೋಪ ಸಮಾರಂಭವನ್ನು ಕುಂಬಳೆ ಸರ್ಕಲ್ ಇನ್ಸ್ ಪೆಕ್ಟರ್ ಪ್ರಮೋದ್ ಅವರು ಮೊಗ್ರಾಲ್ ಪೇಟೆಯಲ್ಲಿ ಉದ್ಘಾಟಿಸುವರು. ಮೊಗ್ರಾಲ್ ಟೌನ್ ಶಾಫಿ ಮಸೀದಿ ಇಮಾಮ್ ಅಬ್ದುಲ್ ಸಲಾಂ ವಾಫಿ ವಾವೂರು ಮಾದಕ ವಸ್ತು ವಿರೋಧಿ ಸಂದೇಶ ನೀಡಲಿದ್ದಾರೆ. ಧಾರ್ಮಿಕ, ಸಾಮಾಜಿಕ-ಸಾಂಸ್ಕøತಿಕ ಹಾಗೂ ಶೈಕ್ಷಣಿಕ ಕ್ಷೇತ್ರದ ಪ್ರಮುಖರು ಸಮಾರಂಭದಲ್ಲಿ ಉಪಸ್ಥಿತರಿರುವರು.
           ಸುದ್ದಿಗೋಷ್ಠಿಯಲ್ಲಿ ದೇಶೀಯ ವೇದಿ ಪದಾಧಿಕಾರಿಗಳಾದ ಎ.ಎಂ.ಸಿದ್ದೀಕ್ ರಹಮಾನ್, ಟಿ.ಕೆ.ಜಾಫರ್, ಮೊಹಮ್ಮದ್ ಸ್ಮಾರ್ಟ್, ಎಂ.ಎಂ.ರಹಮಾನ್, ರಿಯಾಜ್ ಕರೀಂ, ವಿಜಯಕುಮಾರ್, ಎಂ.ಎ.ಮೂಸಾ ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries