ಕೋಲ್ಕತ್ತ: ಹೌರಾ ಜಿಲ್ಲೆಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿ ಹೋರಾಟಗಾರ ಹಾಗೂ ವಿದ್ಯಾರ್ಥಿ ಮುಖಂಡ ಅನೀಶ್ ಖಾನ್ ಅವರ ನಿಗೂಢ ಸಾವು ಖಂಡಿಸಿ ಸಿಪಿಎಂನ ವಿದ್ಯಾರ್ಥಿ ಘಟಕ ಎಸ್‌ಎಫ್‌ಐ ಪಶ್ಚಿಮ ಬಂಗಾಳದಾತ್ಯಂತ ಪ್ರತಿಭಟನೆ ನಡೆಸಲು ನಿರ್ಧರಿಸಿದೆ.

ಶುಕ್ರವಾರ ರಾತ್ರಿ ಅಮಟಾದಲ್ಲಿನ ತಮ್ಮ ನಿವಾಸಕ್ಕೆ ಪೊಲೀಸ್ ಸಮವಸ್ತ್ರದಲ್ಲಿ ಕೆಲವರು ಒಳನುಗ್ಗಿ ಅನೀಶ್ ಅವರನ್ನು ಮಹಡಿಗೆ ಎಳೆದೊಯ್ದು ಅಲ್ಲಿಂದ ಕೆಳಕ್ಕೆ ತಳ್ಳಿ ಹತ್ಯೆ ಮಾಡಿದ್ದಾರೆ ಎಂದು ಅವರ ಕುಟುಂಬ ಆರೋಪಿಸಿದೆ.
ಆದರೆ ಪೊಲೀಸರು ಈ ಆರೋಪವನ್ನು ತಳ್ಳಿ ಹಾಕಿದ್ದು, ಖಾನ್ ಅವರು ಅವರ ನಿವಾಸದ ಬಳಿ ಶವವಾಗಿ ಪತ್ತೆಯಾಗಿದ್ದರು ಎಂದು ಹೇಳಿದ್ದಾರೆ.
ಆಡಳಿತಾರೂಢ ಟಿಎಂಸಿಯ ಮುಖಂಡರೊಬ್ಬರು ಹತ್ಯೆಗೆ ಸಂಚು ರೂಪಿಸಿರುವುದಾಗಿ ಆರೋಪಿಸಿ ಕಾಂಗ್ರೆಸ್, ಸಿಪಿಎಂ ಮತ್ತು ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿವೆ. ಆದರೆ ಟಿಎಂಸಿ ಈ ಆರೋಪ ನಿರಾಕರಿಸಿದ್ದು ಪಿತೂರಿಯನ್ನು ವ್ಯವಸ್ಥಿತವಾಗಿ ರಾಜ್ಯದ ಹೊರಗೆ ರೂಪಿಸಿರಬಹುದು ಎಂದು ಹೇಳಿದೆ.
'ಖಾನ್ ಕುಟುಂಬ ಮತ್ತು ಅಲಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಸಹಕಾರದಿಂದ ಸ್ಟೂಡೆಂಟ್ಸ್ ಫೆಡರೇಷನ್ ಆಫ್ ಇಂಡಿಯಾ (ಎಸ್‌ಎಫ್‌ಐ) ರಾಜ್ಯದಾದ್ಯಂತ ಸೋಮವಾರ ಪ್ರತಿಭಟನೆ ನಡೆಸಲು ನಿರ್ಧರಿಸಿದೆ' ಎಂದು ಎಸ್‌ಎಫ್‌ಐ ರಾಜ್ಯ ಸಮಿತಿ ಸದಸ್ಯ ಸಭಾಜಿತ್ ಸರ್ಕಾರ್ ತಿಳಿಸಿದ್ದಾರೆ.