ಕಾಸರಗೋಡು: ಅಣ0ಗೂರು ನಡುವಳಪ್ಪು ಶ್ರೀ ರಕ್ತೇಶ್ವೇರಿ ದೈವಸ್ಥಾನದ ಬ್ರಹ್ಮ ಕಲಶ ಮಹೋತ್ಸವದಂಗವಾಗಿ ಜರುಗಿದ ಧಾರ್ಮಿಕ ಸಭೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಧಾರ್ಮಿಕ ಸಭೆಯಲ್ಲಿ ಕ್ಷೇತ್ರ ತಂತ್ರಿ ಬ್ರಹ್ಮಶ್ರೀ ಉಳಿಯ ವಿಷ್ಣು ಅಸ್ರ ಅನುಗ್ರಹ ಭಾಷಣ ಮಾಡಿದರು. ಹಿಂದೂ ಐಕ್ಯ ವೇದಿ ಕೇರಳ ಪ್ರಾಂತ ಅಧ್ಯಕ್ಷೆ ಶಶಿಕಲಾ ಟೀಚರ್ ಮುಖ್ಯ ಭಾಷಣ ಮಾಡಿದರು. ಸಮಾಜಸೇವಕ ರವೀಶತಂತ್ರಿ ಕುಂಟಾರ್, ನಗರಸಭೆಯ ಪ್ರತಿಪಕ್ಷ ಮುಖಂಡ ಪಿ ರಮೇಶ್, ನಗರಸಭಾ ಸದಸ್ಯೆ ಶಾರದಾ, ಸೂರಜ್ ಕಾಸರಗೋಡು, ಪ್ರಭಾಕರ ಉದಯಗಿರಿ, ದೇವದಾಸ್ ನುಳ್ಳಿಪಾಡಿ, ಪುಷ್ಪ ಗಣೇಶ್ ಉಪಸ್ಥಿತರಿದ್ದರು. ಸಮಿತಿ ಅಧ್ಯಕ್ಷ ಅಶೋಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಜಯನ್ ಸವಾಗತಿಸಿದರು. ಅನಿತಾ ಅಶೋಕ್ ವಂದಿಸಿದರು. ಶಂಕರ್ ಜೆ. ಪಿ ಕಾರ್ಯಕ್ರಮ ನಿರೂಪಿಸಿದರು.