ಪಾಲಕ್ಕಾಡ್: ಪಾಲಕ್ಕಾಡ್‍ನ ಮಲಂಪುಳ ಚೇರಾಟ್ ನಲ್ಲಿರುವ ಕುಂಪಾಚಿ ಬೆಟ್ಟ ಬಾಬು ಎಂಬ ಯುವಕ ಸಿಲುಕಿ ಪಡಿಪಾಟಲು ಪಟ್ಟ ಘಟನೆ ಸುದ್ದಿಯಾಗಿತ್ತು. ಯುವಕನನ್ನು ರಕ್ಷಿಸಲು ಸೇನೆ ನಡೆಸಿದ ರಕ್ಷಣಾ ಕಾರ್ಯಾಚರಣೆ ರಾಷ್ಟ್ರೀಯ ಮಾಧ್ಯಮಗಳಲ್ಲಿಯೂ ಸುದ್ದಿಯಾಗಿತ್ತು. ಘಟನೆಯ ನಂತರ ಕುಂಪಾಚಿ ಬೆಟ್ಟವನ್ನು ವೀಕ್ಷಿಸಲು ರಾಜ್ಯದ ವಿವಿಧೆಡೆಯಿಂದ ಸಾಕಷ್ಟು ಮಂದಿ ಆಗಮಿಸುತ್ತಾರೆ. ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಡುವ ಪ್ರದೇಶಕ್ಕೆ ಅನುಮತಿ ಇಲ್ಲದೆ ಅನೇಕರು ಪ್ರವೇಶಿಸಿರುವುದು ತಲೆನೋವಿಗೆ ಕಾರಣವಾಗಿದೆ. ಹಲವರ ಆಗಮನದಿಂದ ಸ್ಥಳೀಯರಿಗೆ ತೊಂದರೆಯಾಗುತ್ತಿದೆ ಎಂಬ ದೂರು ವ್ಯಾಪಕವಾಗಿತ್ತು. ಇದರ ಬೆನ್ನಲ್ಲೇ ನಿನ್ನೆ ಪಾಲಕ್ಕಾಡ್ ಜಿಲ್ಲಾಧಿಕಾರಿ ಸಭೆ ಕರೆದಿದ್ದರು.
ಇನ್ನು ಮುಂದೆ ಕುಂಪಾಚಿ ಬೆಟ್ಟ ಹತ್ತುವುದಕ್ಕೆ ನಿಷೇಧ ಹೇರಲಾಗಿದ್ದು, ಕಾನೂನು ಮೀರಿದವರ ಮೇಲೆ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಆದೇಶ ಶೀಘ್ರದಲ್ಲೇ ಹೊರಬೀಳಲಿದೆ. ಕಾನೂನು ಉಲ್ಲಂಘಿಸುವವರಿಗೆ ದಂಡ ವಿಧಿಸಲು ಹಾಗೂ ಅಪಾಯದ ವಲಯಕ್ಕೆ ಪ್ರವೇಶಿಸುವ ಜನರನ್ನು ನಿಯಂತ್ರಿಸಲು ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು. ಈ ಪ್ರದೇಶದಲ್ಲಿ ಗಸ್ತು ತಿರುಗಲು ಸಹಕರಿಸಲು ನಾಗರಿಕ ರಕ್ಷಣಾ ಸ್ವಯಂಸೇವಕರನ್ನು ನಿಯೋಜಿಸಲು ಮತ್ತು ಶೀಘ್ರದಲ್ಲೇ ಈ ಪ್ರದೇಶದಲ್ಲಿ ಎಚ್ಚರಿಕೆ ಫಲಕಗಳನ್ನು ಸ್ಥಾಪಿಸಲು ಪೆÇಲೀಸ್ ಮತ್ತು ಅರಣ್ಯ ಇಲಾಖೆ ನಿರ್ಧರಿಸಿದೆ.
ಬೆಟ್ಟದಲ್ಲಿ ಸಿಲುಕಿದ ಬಾಬು ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ. ಅರಣ್ಯದಲ್ಲಿ ಅತಿಕ್ರಮ ಪ್ರವೇಶ ಮಾಡಿದ್ದಕ್ಕಾಗಿ ಪ್ರಕರಣ ದಾಖಲಾಗಿದೆ. ಕೇರಳ ಅರಣ್ಯ ಕಾಯಿದೆ (27) ಅಡಿಯಲ್ಲಿ ವಳಯಾರ್ ರೇಂಜ್ ಆಫೀಸರ್ ಈ ಪ್ರಕರಣವನ್ನು ಕೈಗೆತ್ತಿಕೊಂಡಿದ್ದರು. ಬಾಬು ಜೊತೆ ಬೆಟ್ಟ ಹತ್ತಿದ ವಿದ್ಯಾರ್ಥಿಗಳ ವಿರುದ್ಧವೂ ಪ್ರಕರಣ ದಾಖಲಾಗಿದೆ. ಬಾಬುವನ್ನು ರಕ್ಷಿಸಿದ ನಂತರ ಮತ್ತೊಬ್ಬ ವ್ಯಕ್ತಿ ಬೆಟ್ಟ ಹತ್ತಿದ ಘಟನೆಯೂ ನಡೆದಿತ್ತು.