ಕಾಸರಗೋಡು: ಚೆರ್ವತ್ತೂರು ಮುತ್ತಪ್ಪನ್ ಕ್ಷೇತ್ರದಲ್ಲಿ ಮುಸ್ಲಿಂ ಮಹಿಳೆಯ ಸಾಂತ್ವನದ ವಿಡಿಯೋ ಕಳೆದ ದಿನ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸುದ್ದಿಯಾಗಿತ್ತು. ಮಹಿಳೆಯ ಯಾತನೆ, ನೋವನ್ನು ಅರಿತು ಸಾಂತ್ವನದ ಮಾತುಗಳನ್ನಾಡಿದ ಮುತ್ತಪ್ಪನ್ ತೆಯ್ಯಂ ನ ವಿಡಿಯೋಗೆ ಪ್ರತಿಕ್ರಿಯೆಯಾಗಿ ಹಲವರು ಅ|ಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕಾಸರಗೋಡಿನ ವಲಿಯ ಪರಂಬು ಮೂಲದ ಎಂಟಿ ರಮ್ಲತ್ ಎಂಬ ಮಹಿಳೆಯೇ ವೈರಲ್ ಆಗಿರುವ ವಿಡಿಯೋ. ಮುತ್ತಪ್ಪನ್ ತೆಯ್ಯಂ ನ್ನು ಕಣ್ಣೂರಿನ ಕರಿವೆಳ್ಳೂರಿನ ಕಲಾವಿದ ಸುನಿಲ್ ಪೆರುವಣ್ಣನ್ ನಿರ್ವಹಿಸಿದ್ದರು. ವಿಡಿಯೋ ವ್ಯಾಪಕ ಚರ್ಚೆಗೆ ಗ್ರಾಸವಾದ ನಂತರ ರಮ್ಲತ್ ತಮ್ಮ ಅನುಭವದ ಬಗ್ಗೆ ಮಾತನಾಡಿದ್ದಾರೆ.
ಕುಟುಂಬ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಕರೀಂ ತನ್ನ ಪತಿಯಾಗಿದ್ದು ಎರಡು ವರ್ಷಗಳ ಹಿಂದೆ ಮುಂಬೈನಲ್ಲಿ ಹೋಟೆಲ್ ಕೆಲಸಗಾರರಾಗಿದ್ದವರು ಉದ್ಯೋಗ ಕಳೆದುಕೊಂಡರು. ಮೂರು ಮಕ್ಕಳಿರುವ ಕುಟುಂಬ ಜೀವನ ನಡೆಸುವುದೇ ಕಷ್ಟವಾಗಿದೆ. ಇಷ್ಟೆಲ್ಲಾ ದುಃಖದಿಂದ ಮುತ್ತಪ್ಪನ್ ದೈವದ ಅನುಗ್ರಹ ಪಡೆಯಲು ತೆರಳಿದ್ದೆ ಎಂದು ರಮ್ಲತ್ ಹೇಳಿದರು.ಮುತ್ತಪ್ಪನನ್ನು ನೋಡಿದ ನಂತರ ಅನೇಕರು ಸಹಾಯದ ಕೊಡುಗೆಗಳೊಂದಿಗೆ ಮುಂದೆ ಬಂದಿದ್ದಾರೆ. ಕೆಲವು ಸಂಕುಚಿತ ಮನಸ್ಸಿನವರು ನನ್ನ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ ಎಂದು ರಮ್ಲತ್ ಹೇಳಿದ್ದಾರೆ. ಆದರೆ ಇದನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಅವರು ತಿಳಿಸಿದ್ದಾರೆ.