ಕಾಸರಗೋಡು: ಜಿಲ್ಲೆಯ ಪ್ರಮುಖ ಭಗವತೀ ಕ್ಷೇತ್ರಗಳಲ್ಲಿ ಒಂದಾದ ಪಾಲಕುನ್ನು ಶ್ರೀ ಭಗವತೀ ಕ್ಷೇತ್ರದಲ್ಲಿ ಮಹಾ ನೈವೇದ್ಯ ಸಮರ್ಪಣಾ ಕಾರ್ಯ ಭಕ್ತಿ, ಸಡಗರದಿಂಧ ನೆರವೇರಿತು. ಪಾಲಕುನ್ನು ಕಯಕಂ ವ್ಯಾಪ್ತಿಯ ಸಾವಿರಾರು ಮಂದಿ ಭಕ್ತಾದಿಗಳು ಮಣ್ಣಿನ ಹೊಸ ಮಡಕೆಯೊಂದಿಗೆ ಬೆಳ್ತಿಗೆ ಅಕ್ಕಿ, ತೆಂಗಿನಕಾಯಿ, ವೀಳ್ಯದೆಲೆ, ಅಕ್ಕರೆ, ಅಕ್ಕಿ ಹುಡಿ ಸೇರಿದಂತೆ ನೈವೇದ್ಯ ತಯಾರಿಸಲಿರುವ ಸಾಮಗ್ರಿ ಸಮರ್ಪಿಸಿ, ದೇವಾಲಯ ವಠಾರದಲ್ಲಿ ನೈವೇದ್ಯ ತಯಾರಿಸಿ ಶ್ರೀದೇವಿಗೆ ಸಮರ್ಪಿಸುವುದು ವಾಡಿಕೆ.
ಪಾಲಕುನ್ನು ಶ್ರೀ ಭಗವತೀ ಕ್ಷೇತ್ರದಲ್ಲಿ ವರ್ಷದಲ್ಲಿ ಜನವರಿ ಮತ್ತು ಫೆಬ್ರವರಿ ತಿಂಗಳಲ್ಲಿ ನೈವೇದ್ಯ ಸಮರ್ಪಿಸಲಾಗುತ್ತಿದ್ದು, ಫೆಬ್ರವರಿಯ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರಾಧಾನ್ಯತೆ ಹೊಂದಿದೆ. ಶ್ರೀ ದೇವಿಗೆ ನೈವೇದ್ಯ ಸಮರ್ಪಿಸಿದ ನಂತರ ಉಳಿದ ನೈವೇದ್ಯವನ್ನು ಭಕ್ತಾದಿಗಳು ಮನೆಗೆ ಕೊಂಡೊಯ್ಯುವುದು ವಾಡಿಕೆಯಾಗಿದೆ. ಕೋವಿಡ್ ಮಾನದಂಡ ಪಾಲಿಸಿಕೊಂಡು ನೈವೇದ್ಯ ಸಮರ್ಪಣಾ ಕಾರ್ಯ ನೆರವೇರಿತು.