ಕುಂಬಳೆ: ಬಂಬ್ರಾಣಕೊಟ್ಯದಮನೆ 'ಆನೆಬೈದ್ಯ'ಬಿರುದಾಂಕಿತ ನಾರಾಯಣ ಪೂಜಾರಿ ಅವರ 70ನೇ ಹುಟ್ಟುಹಬ್ಬದ ಅಂಗವಾಗಿ ಸಪ್ತತಿ ಸಮಾರಂಭ, ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ, ಔಷಧೀಯ ಗಿಡಮೂಲಿಕೆಗಳ ವಿತರಣೆ ಫೆ. 20ರಂದು ಬಂಬ್ರಾಣ ಕೊಟ್ಯದಮನೆಯಲ್ಲಿ ಜರುಗಲಿದೆ.
ಬೆಳಗ್ಗೆ 6ಕ್ಕೆ ಗಣಹೋಮ, 7ಕ್ಕೆ ಸಪ್ತತಿ ಶಾಂತಿ, ಪೂಣಾಹುತಿ, ನಾಗತಂಬಿಲ, ಶ್ರೀ ಸತ್ಯನಾರಾಯಣ ಪೂಜೆ, 11ಕ್ಕೆ ಸಪ್ತತಿ ಸಂಭ್ರಮ, ವಿದ್ಯಾನಿಧಿ, ಔಷಧೀಯ ಸಸ್ಯಗಳ ವಿತರಣೆ, ಸಾಧಕರಿಗೆ ಸನ್ಮಾನ ನಡೆಯುವುದು. ಮಧ್ಯಾಹ್ನ 2.30ಕ್ಕೆ ಯಕ್ಷಗಾನ ತಾಳಮದ್ದಳೆ ನಡೆಯುವುದು.