ತಿರುವನಂತಪುರ: ಸ್ವಪ್ನಾ ಸುರೇಶ್‍ಗೆ ಹೊಸ ಉದ್ಯೋಗ ಲಭಿಸಿದೆ. ಎಚ್ ಆರ್ ಡಿ ಎಸ್ ಇಂಡಿಯಾ ಎಂಬ ಎನ್ ಜಿ ಒ ದಲ್ಲಿ ಆಕೆಗೆ ಕೆಲಸ ಲಭ್ಯವಾಗಿದೆ. ಕಾಪೆರ್Çರೇಟ್ ಸಾಮಾಜಿಕ ಜವಾಬ್ದಾರಿ ವ್ಯವಸ್ಥಾಪಕರ ಸೂಚನೆ ಮೇರೆಗೆ ಉದ್ಯೋಗ ನೀಡಲಾಗಿದೆ. ಎಚ್ ಆರ್ ಡಿ ಎಸ್ ಇಂಡಿಯಾ ಪಾಲಕ್ಕಾಡ್ ಮೂಲದ ಎನ್.ಜಿ.ಒ ಆಗಿದೆ. ಇದೇ ತಿಂಗಳ 12ರಂದು ಹೊಸ ಉದ್ಯೋಗಕ್ಕೆ ಸೇರುವ ಪ್ರಸ್ತಾವನೆ ಇತ್ತು. ಬ್ಯುಸಿಯಾಗಿರುವ ಕಾರಣ ನಂತರ ಕೆಲಸಕ್ಕೆ ಸೇರುತ್ತೇನೆ ಎಂದು ಸ್ವಪ್ನಾ ಸುರೇಶ್ ಮಾಹಿತಿ ನೀಡಿದರು.
43,000 ಮಾಸಿಕ ಸಂಬಳದೊಂದಿಗೆ ಸ್ವಪ್ನಾ ಸುರೇಶ್ ಕೆಲಸಕ್ಕೆ ಪ್ರವೇಶಿಸಲಿದ್ದಾರೆ. ಇದೇ ವೇಳೆ ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಸ್ವಪ್ನಾ ಸುರೇಶ್ ಪರ ವಕೀಲರು ವಿಚಾರಣೆಯಿಂದ ಹಿಂದೆಸರಿದಿರುವರು. ಕೊಚ್ಚಿ ಎನ್‍ಐಎ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಹಿಂದೆ ಸರಿದಿರುವುದು ಅಚ್ಚರಿಗೆ ಕಾರಣವಾಗಿದೆ. ಕಾರಣವನ್ನು ಸ್ಪಷ್ಟಪಡಿಸಲು ಸಾಧ್ಯವಿಲ್ಲ ಎಂದು ವಕೀಲ ಸೂರಜ್ ಟಿ ಇಳಂಜಿಕಲ್ ಹೇಳಿದ್ದಾರೆ.
ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಸ್ವಪ್ನಾ ಸುರೇಶ್ ವಿವಾದಾತ್ಮಕ ವಿಷಯ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಇಡಿ ಮತ್ತೆ ವಿಚಾರಣೆ ನಡೆಸಲು ಸಿದ್ಧತೆ ನಡೆಸಿದೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕಳುಹಿಸಲಾಗಿದೆ. ಜೈಲಿನಿಂದ ಸರ್ಕಾರದ ಪರ ಆಡಿಯೋ ರೆಕಾರ್ಡ್ ಮಾಡಿರುವುದು ಕಪೆÇೀಲಕಲ್ಪಿತ ಎಂದು ಸ್ವಪ್ನಾ ಸುರೇಶ್ ಬಹಿರಂಗಪಡಿಸಿದ್ದರು. ಇದಾದ ಬಳಿಕ ಇಡಿ ಸ್ವಪ್ನಾ ಸುರೇಶ್ ಅವರನ್ನು ಮತ್ತೆ ವಿಚಾರಣೆಗೊಳಪಡಿಸಲಾಗಿದೆ.
ಇತ್ತೀಚೆಗಷ್ಟೇ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸ್ವಪ್ನಾ ಅವರು ಪ್ರಕರಣದ ನಂತರ ತಮ್ಮ ಆರ್ಥಿಕ ಸ್ಥಿತಿ ಹದಗೆಟ್ಟಿದ್ದು, ಸಹಾಯ ಮಾಡುವವರು ಯಾರೂ ಇಲ್ಲ ಎಂದು ಹೇಳಿದ್ದರು.