ಕೀವ್: ರಷ್ಯಾ- ಯೂಕ್ರೇನ್ ನಡುವೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ದಾಳಿ-ಪ್ರತಿದಾಳಿಗಳು ನಡೆಯುತ್ತಿರುವ ನಡುವೆಯೇ ರಷ್ಯಾ ಹ್ಯಾಕರ್ಸ್ ಯೂಕ್ರೇನ್ ಮೇಲೆ ಸೈಬರ್ ದಾಳಿ ನಡೆಸುತ್ತಿದ್ದಾರೆ.
ಕೀವ್: ರಷ್ಯಾ- ಯೂಕ್ರೇನ್ ನಡುವೆ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ದಾಳಿ-ಪ್ರತಿದಾಳಿಗಳು ನಡೆಯುತ್ತಿರುವ ನಡುವೆಯೇ ರಷ್ಯಾ ಹ್ಯಾಕರ್ಸ್ ಯೂಕ್ರೇನ್ ಮೇಲೆ ಸೈಬರ್ ದಾಳಿ ನಡೆಸುತ್ತಿದ್ದಾರೆ.
ಯೂಕ್ರೇನ್ ಸರ್ಕಾರಿ ಇಲಾಖೆಗಳು, ಬ್ಯಾಂಕಿಂಗ್ ವೆಬ್‌ಸೈಟ್‌ಗಳ ಮೇಲೆ ಸೈಬರ್ ದಾಳಿಯಾಗಿದ್ದು, ರಷ್ಯಾ ದಾಳಿ ಬೆಂಬಲಿಸಿ ಘೋಷಣೆಗಳನ್ನು ಹಾಕಿದ್ದಾರೆ.
ಆರಂಭದಲ್ಲಿ ಸರ್ಕಾರಿ ಏಜೆನ್ಸಿಗಳು ಮತ್ತು ಪ್ರಮುಖ ಬ್ಯಾಂಕ್‌ಗಳ ವೆಬ್‌ಸೈಟ್‌ಗಳ ಮೇಲೆ ಸೈಬರ್ ಅಟ್ಯಾಕ್ ಮಾಡಲಾಗಿದ್ದು, ಇದರಿಂದ ವೆಬ್‌ಸೈಟ್‌ಗಳು ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ್ದು, ಯೂಕ್ರೇನ್ನಲ್ಲಿ ತಲ್ಲಣ ಸೃಷ್ಟಿಯಾಗಿದೆ. ಯೂಕ್ರೇನ್ನ ರಕ್ಷಣಾ ಸಚಿವಾಲಯ, ವಿದೇಶಾಂಗ ಸಚಿವಾಲಯ, ಸಂಸ್ಕೃತಿ ಸಚಿವಾಲಯ ವೆಬ್‌ಸೈಟ್ ಮೇಲೆ ದಾಳಿ ಮಾಡಿದ್ದರಿಂದ ಸೈಟ್‌ಗಳು ಲೋಡ್ ಆಗಲಿಲ್ಲ. ಮಾಹಿತಿ ಸೋರಿಕೆಯಾದ ಕಂಪ್ಯೂಟರ್‌ಗಳನ್ನ ನೆರೆಯ ಲಾಟ್ವಿಯಾ ಮತ್ತು ಲಿಥುವೇನಿಯಾದಲ್ಲಿವೆ ಎಂದು ಯೂಕ್ರೇನ್ ಸೈಬರ್ ಸೆಕ್ಯುರಿಟಿ ಅಧಿಕಾರಿಗಳು ಹೇಳಿದ್ದಾರೆ.