ಪೆರ್ಲ: ಎಣ್ಮಕಜೆ ಗ್ರಾ.ಪಂ.ಮಾಜಿ ಅಧ್ಯಕ್ಷರಾಗಿ,ಮಂಜೇಶ್ವರ ಬ್ಲಾಕ್ ಪಂಚಾಯತು ಅಧ್ಯಕ್ಷರಾಗಿ ಸಾಮಾಜಿಕ,ಧಾರ್ಮಿಕ ರಂಗದಲ್ಲಿ ಅವಿಸ್ಮರಣೀಯ ಸೇವೆಗೈದು ಇತ್ತೀಚೆಗೆ ಅಗಲಿದ ಹಿರಿಯರಾದ ಟಿ ಆರ್ ಕೆ ಭಟ್ ಪೆರ್ಲ ಅವರಿಗೆ ಪಂಚಾಯತು ಆಡಳಿತ ಸಮಿತಿ ವತಿಯಿಂದ ಸರ್ವಪಕ್ಷ ಸಂತಾಪ ಸಭೆ ಎಣ್ಮಕಜೆ ಗ್ರಾ.ಪಂ. ಸಭಾಂಗಣದಲ್ಲಿ ಜರಗಿತು.
ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್.ಅವರ ಅಧ್ಯಕ್ಷತೆಯಲ್ಲಿ ನಡೆದ ಸಂತಾಪ ಸಭೆಯಲ್ಲಿ ಡಾ.ಶ್ರೀಪತಿ ಕಜಂಪಾಡಿ, ರಾಜಾರಾಮ್ ಪೆರ್ಲ,ಅಬ್ದುಲ್ ರಹಿಮಾನ್ ಪೆರ್ಲ, ಪಂ. ಅಭಿವೃದ್ದಿ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎಸ್.ಗಾಂಭೀರ್, ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಜಯಶ್ರೀ ಕುಲಾಲ್, ಜಿ.ಪಂ.ಸದಸ್ಯ ನಾರಾಯಣ ನಾಯ್ಕ, ಬ್ಲಾಕ್ ಪಂ.ಸದಸ್ಯ ಬಟ್ಟು ಶೆಟ್ಟಿ, ಪಂ.ಸದಸ್ಯರಾದ ರೂಪವಾಣಿ, ರಾಧಾಕೃಷ್ಣ ನಾಯಕ್ ಶೇಣಿ, ಮಹೇಶ್ ಭಟ್,ಇಂದಿರಾ, ಆಶಾಲತಾ,ಉಷಾ ,ಕುಸುಮಾವತಿ,ಪಂ.ಹೆಡ್ ಕ್ಲಾರ್ಕ್ ಪ್ರೇಮನ್, ಸಿಡಿಎಸ್ ಅಧ್ಯಕ್ಷೆ ಜಲಜಾಕ್ಷಿ, ರಾಜಕೀಯ ಪಕ್ಷದ ಪ್ರತಿನಿಧಿಗಳಾದ ವಿನೋದ್ ಪೆರ್ಲ, ನರಸಿಂಹ ಪೂಜಾರಿ, ಎ.ಎ.ಆಯಿಷಾ, ಸುಮಿತ್ ರಾಜ್ ಮೊದಲಾದವರು ಟಿ.ಆರ್.ಕೆ.ಭಟ್ಟರ ಬದುಕಿನ ಗುಣಗಾನ ಮಾಡಿದರು.