ಹೈದರಾಬಾದ್: ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಹವಾಮಾನ ಬದಲಾವಣೆಯಿಂದ ರೈತರನ್ನು ರಕ್ಷಿಸುವ ಕ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ ಮತ್ತು ಇದು 'ಹಸಿರು ಭವಿಷ್ಯದ' ಕಡೆಗೆ ಭಾರತದ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಹೇಳಿದ್ದಾರೆ.
ಇಂದು ಹೈದರಾಬಾದ್ ನಲ್ಲಿ ಅರೆ-ಶುಷ್ಕ ಉಷ್ಣವಲಯಕ್ಕಾಗಿ ಅಂತರಾಷ್ಟ್ರೀಯ ಬೆಳೆಗಳ ಸಂಶೋಧನಾ ಸಂಸ್ಥೆ(ICRISAT)ಯ ಎರಡು ಕೇಂದ್ರಗಳನ್ನು ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ, ಭವಿಷ್ಯದ ದಿನಗಳಲ್ಲಿ ಹವಾಮಾನ ಬದಲಾವಣೆಯಿಂದ ರೈತರನ್ನು ರಕ್ಷಣೆ ಮಾಡುವ ಕೆಲಸವಾಗಬೇಕಿದೆ ಎಂದರು.
'ಹಲವು ವರ್ಷಗಳ ಪ್ರಯತ್ನಗಳನ್ನು ಮುಂದಿಟ್ಟುಕೊಂಡು ಈ ವರ್ಷದ ಬಜೆಟ್‌ನಲ್ಲಿ ಹವಾಮಾನ ಬದಲಾವಣೆಯಿಂದ ರೈತರನ್ನು ರಕ್ಷಿಸುವ ಕ್ರಮಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಈ ವರ್ಷದ ಬಜೆಟ್ ಪ್ರತಿ ವಲಯದಲ್ಲೂ ಹಸಿರು ಭವಿಷ್ಯದತ್ತ ಭಾರತದ ಬದ್ಧತೆಯನ್ನು ಉತ್ತೇಜಿಸುತ್ತದೆ' ಎಂದು ಮೋದಿ ಹೇಳಿದ್ದಾರೆ.
ಬಜೆಟ್ ನೈಸರ್ಗಿಕ ಕೃಷಿ ಮತ್ತು ಡಿಜಿಟಲ್ ಕೃಷಿಗೆ ಒತ್ತು ನೀಡಿದೆ. ಪ್ರೊ ಪ್ಲಾನೆಟ್ ಪೀಪಲ್ ಎನ್ನುವುದು ಪ್ರತಿ ಸಮುದಾಯವನ್ನು ಸಂಪರ್ಕಿಸುವ ಒಂದು ಆಂದೋಲನವಾಗಿದೆ. ಹವಾಮಾನದ ಸವಾಲನ್ನು ನಿಭಾಯಿಸಲು ಹವಾಮಾನ ಜವಾಬ್ದಾರಿಯನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯ ಕರ್ತವ್ಯವೂ ಆಗಿದೆ. ಇದು ಕೇವಲ ಮಾತಿಗೆ ಮಾತ್ರ ಸೀಮಿತವಾಗದೆ ಭಾರತ ಸರ್ಕಾರದ ಕಾರ್ಯಗಳಲ್ಲಿಯೂ ಪ್ರತಿಫಲಿಸುತ್ತಿದೆ ಎಂದರು.