ತಿರುವನಂತಪುರ: ಕೇರಳ ಸರ್ಕಾರ ಹೊರಡಿಸಿರುವ 'ಕೇರಳ ಲೋಕಾಯುಕ್ತ ತಿದ್ದುಪಡಿ ಸುಗ್ರೀವಾಜ್ಞೆ-2022'ರ ಪ್ರಕಾರ, ಸರ್ಕಾರಿ ನೌಕರರನ್ನು ತಪ್ಪಿತಸ್ಥ ಎಂಬುದಾಗಿ ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಘೋಷಿಸಿದರೂ, ರಾಜ್ಯ ಸರ್ಕಾರ ಅದನ್ನು ಒಪ್ಪಬಹುದು ಅಥವಾ ತಿರಸ್ಕರಿಸಬಹುದಾಗಿದೆ.
ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಅವರು ಈ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ. ಈ ಬಗ್ಗೆ ರಾಜ್ಯಪತ್ರದಲ್ಲಿ ಅಧಿಸೂಚನೆಯನ್ನೂ ಪ್ರಕಟಿಸಲಾಗಿದೆ.
ನೌಕರನೊಬ್ಬನನ್ನು ತಪ್ಪಿತಸ್ಥ ಎಂಬುದಾಗಿ ಘೋಷಣೆ ಮಾಡಿದ ನಂತರ, ಅಹವಾಲು ಸಲ್ಲಿಸಲು ಆತನಿಗೆ ಅವಕಾಶ ನೀಡಬೇಕು. ಇದಾದ ನಂತರ, ನೌಕರ ತಪ್ಪಿತಸ್ಥ ಎಂಬ ಘೋಷಣೆಯನ್ನು ಒಪ್ಪುವ ಅಥವಾ ತಿರಸ್ಕರಿಸುವ ಅಧಿಕಾರ ರಾಜ್ಯಪಾಲ, ಮುಖ್ಯಮಂತ್ರಿ ಅಥವಾ ರಾಜ್ಯ ಸರ್ಕಾರಕ್ಕೆ ಇರಲಿದೆ ಎಂಬ ಅಂಶ ಈ ಸುಗ್ರೀವಾಜ್ಞೆಯಲ್ಲಿದೆ.
ರಾಜ್ಯ ಸರ್ಕಾರದ ಈ ನಡೆಯನ್ನು ವಿರೋಧ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಟೀಕಿಸಿವೆ.